ಮಾದಕ ವ್ಯಸನ ಮುಕ್ತ ಸಮಾಜ ಕಟ್ಟುವಲ್ಲಿ ಕೈಜೋಡಿಸೋಣ- ರೆ.ಫಾ. ಜೈಸನ್ ಸೈಮನ್

ಮಾದಕ ವ್ಯಸನ ಮುಕ್ತ ಸಮಾಜ ಕಟ್ಟುವಲ್ಲಿ ಕೈಜೋಡಿಸೋಣ- ರೆ.ಫಾ. ಜೈಸನ್ ಸೈಮನ್

ನೆಲ್ಯಾಡಿ: ಮಾದಕ ವ್ಯಸನ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸೋಣ ಎಂದು ನೆಲ್ಯಾಡಿ ಬೆಥನಿ ಸಂಸ್ಥೆಯ ನಿರ್ದೇಶಕ ರೆ.ಫಾ.ಜೈಸನ್ ಸೈಮನ್ ಓಐಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಬೆಥನಿ ಐಟಿಐ ಯ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾಗಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಡಾ.ವರ್ಗೀಸ್ ಕೈಪನಡುಕ ಓಐಸಿ ಅವರು ಮಾತನಾಡಿ ಆಯ್ಕೆಯಾದವರು ಮಾತ್ರವಲ್ಲ ಎಲ್ಲಾ ವಿದ್ಯಾರ್ಥಿಗಳು ಸ್ವತಃ ನಾಯಕರಾಗಬೇಕು. ಅವರವರ ಏಳಿಗೆಗೆ ಅವರವರೇ ಪ್ರಯತ್ನಿಸಬೇಕು ಎಂಬ ಶುಭ ಹಾರೈಸಿದರು.

ಸಂಸ್ಥೆಯ ಪ್ರಾಚಾರ್ಯ ಸಜಿ.ಕೆ ತೋಮಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಷನ್ ಹೆಚ್, ಉಪಾಧ್ಯಕ್ಷ ಸ್ವಸ್ತಿಕ್, ಕಾರ್ಯದರ್ಶಿ ಅಭಿಷೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಮಹಮ್ಮದ್ ಮಿಜಲಾಜಿ, ಕ್ರೀಡಾ ಕಾರ್ಯದರ್ಶಿ ಆಗಿರುವ ಪವನ್.ಎಸ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ನೂತನ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಅಧ್ಯಾಪಕರುಗಳ ಕಿರು ಪರಿಚಯವನ್ನು ಸಿಬ್ಬಂದಿ ವರ್ಗದ ಕಾರ್ಯದರ್ಶಿಯಾದ ಹರಿಪ್ರಸಾದ್.ರೈ ನೀಡಿದರು. ಸಂಸ್ಥೆಯ ತರಬೇತಿ ಅಧಿಕಾರಿ ಜಾನ್.ಪಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಸ್ವಾಗತಿಸಿದರು. ಹಾಗೂ ಮೆಕಾನಿಕ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಶಿವಾನಂದ.ಎಸ್ ವಂದಿಸಿದರು. ಕಾರ್ಯಾಗಾರ ಮತ್ತು ಲೆಕ್ಕಾಚಾರ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

You May Have Missed

error: Content is protected !!