ನೆಲ್ಯಾಡಿ: ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ ರಚಿಸಿದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

ನೆಲ್ಯಾಡಿ: ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ ರಚಿಸಿದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

ನೆಲ್ಯಾಡಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ ರಚಿಸಿದ “ನೆನಪುಗಳ ನೇವರಿಕೆ” ಪುಸ್ತಕವನ್ನು ಶನಿವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ತಮ್ಮ ಬದುಕಿನ ಜೊತೆಗೆ ಸುತ್ತಮುತ್ತಲ ಬದುಕಿಗೂ ಒಂದಲ್ಲ ಒಂದು ರೀತಿಯಲ್ಲಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ “ನೆನಪುಗಳ ನೇವರಿಕೆ” ಯಲ್ಲಿ ಪ್ರಸ್ತುತ ಜನಾಂಗಕ್ಕೆ ಹಾಗೂ ಮುಂದಿನ ತಲೆಮಾರಿಗೂ ಉಪಯುಕ್ತ ಮಾಹಿತಿ, ಮಾರ್ಗದರ್ಶನವಿದೆ. ಇದು ಕೇವಲ ವ್ಯಕ್ತಿ ಚಿತ್ರಣವಲ್ಲ. ಪ್ರಸ್ತುತ ವಿದ್ಯಮಾನಗಳನ್ನು ಸಾದರಪಡಿಸುವ ಮಾಹಿತಿಯ ಕಣಜವಾಗಿದ್ದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ ಎಂದು ಹೆಗ್ಗಡೆಯವರು ಶ್ಲಾಘಿಸಿ ಲೇಖಕರನ್ನು ಅಭಿನಂದಿಸಿದರು.

ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್ ಎಂ.ಪಿ., ನಿವೃತ್ತ ಮುಖ್ಯ ಶಿಕ್ಷಕ ಟಿ.ರವೀಂದ್ರ, ನಿವೃತ್ತ ಮುಖ್ಯಶಿಕ್ಷಕಿ ಸರೋಜಾ ಕುಮಾರಿ.ಎಂ. ಸಂಧ್ಯಾ, ಮತ್ತು ಡಾ.ಮೌಲಿಕಾ.ಎಂ.ಎಸ್. ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!