ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ಬೆಳ್ತಂಗಡಿ ನೆರಿಯದಲ್ಲಿ ನದಿಗೆ ಇಳಿದಿದ್ದ ತೋಟತ್ತಾಡಿ ನಿವಾಸಿ ಯುವಕನೋರ್ವ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.

ನೆರಿಯ ಗ್ರಾಮದ ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಂಬಾತನೇ ಮೃತಪಟ್ಟಿರುವ ಯುವಕನಾಗಿದ್ದಾನೆ. ಈತ ಭಾನುವಾರ ಗೆಳೆಯರೊಂದಿಗೆ ಮೀನು ಹಿಡಿಯಲು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ಹೋಗಿದ್ದ ಎನ್ನಲಾಗಿದೆ. ನದಿಯಲ್ಲಿ ಸಂಜೆಯ ವೇಳೆ ಈತ ನಾಪತ್ತೆಯಾಗಿದ್ದ. ಈತನಿಗಾಗಿ ಸ್ಥಳೀಯರ ನೇತೃತ್ವದಲ್ಲಿ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿದೆ

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Previous post

ಬಾಗಲಕೋಟೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಇಚ್ಲಂಪಾಡಿ ಗ್ರಾಮದ ನಿಕ್ಷಿತ್ ಡಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Next post

ಕೊಕ್ಕಡ ಕೆನರಾ ಬ್ಯಾಂಕಿನ ಅವ್ಯವಹಾರ, ಸೈಬರ್ ಅಪರಾಧಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ದ ಬೃಹತ್ ಪ್ರತಿಭಟನೆ

Leave a Reply

You May Have Missed

error: Content is protected !!