ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರಿನಲ್ಲಿ ಬಂಧಿಸಿದ ಬೆಳ್ತಂಗಡಿ ಪೊಲೀಸ್ ತಂಡ

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರಿನಲ್ಲಿ ಬಂಧಿಸಿದ ಬೆಳ್ತಂಗಡಿ ಪೊಲೀಸ್ ತಂಡ

ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ, 6ತಿಂಗಳು ಶಿಕ್ಷೆಗೊಳಪಟ್ಟ ಆರೋಪಿ ಪೂತ್ತೂರು ತಾಲೂಕು ಜಡೇಕಲ್ಲು ಮನೆ ನಿವಾಸಿ ಅಬ್ದುಲ್ ರಹಿಮಾನ್ (50ವ) ಎಂಬವರನ್ನು ಅ.14 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ .ಜಿ ಸುಬ್ಬಾಪೂರ್ ಮಠ ನೇತೃತ್ವದಲ್ಲಿ ದಸ್ತಗಿರಿ ಮಾಡಿದ್ದಾರೆ.

ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್. ಸಿ ವ್ರಷಭ ಮತ್ತು ಪಿಸಿ ಮುನಿಯ ನಾಯ್ಕ್, ರವರು ಪೂತ್ತೂರುನಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಜೈಲಿಗೆ ಕಳುಹಿಸಲಾಗಿದೆ. ಈತನ ಪತ್ತೆ ಬಗ್ಗೆ ಪೂತ್ತೂರು ನಗರ ಎ.ಎಸ್.ಐ ಪರಮೇಶ್ವರ್ ಸಹಕರಿಸಿರುತ್ತಾರೆ.

Leave a Reply

You May Have Missed

error: Content is protected !!