ಶಿಶಿಲ ಶ್ರೀದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

ಶಿಶಿಲ ಶ್ರೀದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

ಶಿಶಿಲ ಗ್ರಾಮದ ಕೊಳಂಬೆ ರವಿ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಯರಿಂಗ್ ಸೇರಿದಂತೆ 25,000 ಹೆಚ್ಚಿನ ನಷ್ಟ ಸಂಭವಿಸಿತು.

ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಸದಸ್ಯರು ಹಾಗೂ ಪದಾಧಿಕಾರಿಗಳು ಮನೆಯ ವಯರಿಂಗ್ ದುರಸ್ತಿಗೊಳಿಸಿಕೊಟ್ಟು ಸದಸ್ಯರು ಸಂಗ್ರಹಿಸಿದ ದೇಣಿಗೆಯನ್ನು ರವಿಯವರಿಗೆ ಹಸ್ತಾಂತರಿಸಿದರು. ಸಿಡಿಲಿಗೆ ಛಿದ್ರಗೊಂಡಿದ್ದ ಸ್ಟೆಬಿಲೈಸರ್, ರಿಸೀವರ್ ಬದಲಿಗೆ ಹೊಸ ಉಪಕರಣಗಳನ್ನು ನೀಡಲಾಯಿತು. ಅರಸಿನಮಕ್ಕಿ ಅನ್ನಾ ಎಂಟರ್ಪ್ರೈಸಸ್ ಉಚಿತವಾಗಿ ಡಿಶ್ ಕೇಬಲ್ ನೀಡಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರು, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!