ಆಟೋ ರಿಕ್ಷಾದಲ್ಲಿ ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು

ಆಟೋ ರಿಕ್ಷಾದಲ್ಲಿ ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು

ಬಜರಂಗದಳ ಕಾರ್ಯಕರ್ತರು ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಘಟನೆ ಪುತ್ತೂರಿನಲ್ಲಿ ಅ.16ರ ಬುಧವಾರ ನಡೆದಿದೆ.

ಬಜರಂಗದಳದ ಕಾರ್ಯಕರ್ತರು ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.

ಗೋವನ್ನು ಅಕ್ರಮವಾಗಿ ಪುತ್ತೂರು ಬೈಪಾಸ್ ರಸ್ತೆಯ ಮೂಲಕ ವ್ಯಕ್ತಿಯೋರ್ವ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿರುವುದರ ಕುರಿತು ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ ಪ್ರಯಾಣಿಸುತ್ತಿದ್ದು, ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Leave a Reply

You May Have Missed

error: Content is protected !!