ಆಲ್ಟೋ ಕಾರು-ಆಕ್ಟೀವಾ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

ಆಲ್ಟೋ ಕಾರು-ಆಕ್ಟೀವಾ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೊಣಾಲು ಗ್ರಾಮದ ಆರ್ಲದಲ್ಲಿ ಆಲ್ಟೋ ಕಾರು ಹಾಗೂ ಆಕ್ಟೀವಾ ನಡುವೆ ಡಿಕ್ಕಿ ಸಂಭವಿಸಿ ಆಕ್ಟೀವಾ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಅ.25ರಂದು ರಾತ್ರಿ ನಡೆದಿದೆ.

ಗಾಯಗೊಂಡವರನ್ನು ರಬ್ಬರ್ ಟ್ಯಾಪಿಂಗ್ ಕಾರ್ಮಿಕ, ಕೇರಳ ಮೂಲದ ಬಿಜು(42ವ.) ಎಂದು ಗುರುತಿಸಲಾಗಿದೆ.

ಇವರು ಪಾಂಡಿಬೆಟ್ಟು ಕಡೆಯಿಂದ ಆಕ್ಟೀವಾದಲ್ಲಿ ಬಂದವರು ಆರ್ಲ ಜಂಕ್ಷನ್‌ನಲ್ಲಿ ಹೈವೆಗೆ ಸಂಪರ್ಕಿಸುತ್ತಿದ್ದಂತೆ ನೆಲ್ಯಾಡಿಯಿಂದ ಗೋಳಿತ್ತೊಟ್ಟು ಕಡೆಗೆ ಬರುತ್ತಿದ್ದ ಆಲ್ಟೋ ಕಾರು ನಡುವೆ ಡಿಕ್ಕಿ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಬಿಜು ಅವರು ಗಂಭೀರ ಗಾಯಗೊಂಡಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

Leave a Reply

You May Have Missed

error: Content is protected !!