ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ಸುರೇಶ್ ಪಡಿಪಂಡ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಜೆಸ್ಸಿ.ಕೆ.ಎ ಆಯ್ಕೆ

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ಇಲ್ಲಿ ಡಿಸೆಂಬರ್ 14ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ಸುರೇಶ್ ಪಡಿಪಂಡ, ಉಪಾಧ್ಯಕ್ಷರಾಗಿ ರಫೀಕ್ ಉಳಿತೊಟ್ಟು, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಜೆಸ್ಸಿ.ಕೆ.ಎ, ಕೋಶಾಧಿಕಾರಿಯಾಗಿ ಶಿವಪ್ರಸಾದ್ ದುಗ್ಗಲ, ಜೊತೆ ಕಾರ್ಯದರ್ಶಿಯಾಗಿ ಲೀಲಾವತಿ.ಎಂ, ಸದಸ್ಯರಾಗಿ ಸತಿಶ್ಚಂದ್ರ ಅತ್ರಿಜಾಲು, ಧನಂಜಯ ಗೌಡ ಹೊಸವಕ್ಲು, ಅನಿಲ್ ರೈ ಹಾರ್ಪಳ, ತಾರಾದೇವಿ, ಚಂದ್ರಶೇಖರ ರೈ ರಾಮನಗರ,ದೇವಕಿ, ಅಣ್ಣಿ ಎಲ್ತಿಮಾರ್, ಸಲಾಂ ಬಿಲಾಲ್, ಹನೀಫ್ ಉಳಿತೊಟ್ಟು, ಸುನೀತಾ ಬೀದಿ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿಚಂದ್ರ ಪಡುಬೆಟ್ಟು, ಮುಖ್ಯಶಿಕ್ಷಕಿ ಜೆಸ್ಸಿ.ಕೆ.ಎ. ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಳೆವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!