ಜಾಕೋಬೈಟ್ ಸಭೆಯ ಮಹಾ ಧರ್ಮಾಧ್ಯಕ್ಷ ಅಬೂನ್ ಮೋರ್ ಬಸೆಲಿಯೋಸ್ ತೋಮಸ್ I ಅವರ ನಿರ್ಯಾಣ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸಂತಾಪ”

ಜಾಕೋಬೈಟ್ ಸಭೆಯ ಮಹಾ ಧರ್ಮಾಧ್ಯಕ್ಷ ಅಬೂನ್ ಮೋರ್ ಬಸೆಲಿಯೋಸ್ ತೋಮಸ್ I ಅವರ ನಿರ್ಯಾಣ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸಂತಾಪ”

ನೆಲ್ಯಾಡಿ: ಜಾಕೋಬೈಟ್ ಸಭೆಯ ಮಹಾ ಧರ್ಮಾಧ್ಯಕ್ಷ ಅಬೂನ್ ಮೋರ್ ಬಸೆಲಿಯೋಸ್ ತೋಮಸ್ I ಅವರ ನಿರ್ಯಾಣವು ಧಾರ್ಮಿಕ ಕ್ಷೇತ್ರಕ್ಕೆ, ವಿಶೇಷವಾಗಿ ಜಾಕೋಬೈಟ್ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಓರ್ವ ಶ್ರೇಷ್ಠ ಧಾರ್ಮಿಕ ಆಚಾರ್ಯರಾಗಿ ಅವರು ನಂಬಿಕೆಯ ಹರಡುವಲ್ಲಿ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಸಮಾಜಕ್ಕೆ ತುಂಬಾ ಪ್ರೀತಿಯ ವ್ಯಕ್ತಿ ಹಾಗೂ ನಂಬಿಗಸ್ತ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇವೆ. ಅವರ ಅಮೂಲ್ಯ ಮಾರ್ಗದರ್ಶನ ಮತ್ತು ಧಾರ್ಮಿಕ ಸೇವೆಯನ್ನು ಸ್ಮರಿಸುತ್ತಾ, ಸಂತ ಅಲ್ಫೋನ್ಸ ಚರ್ಚ್ ನೆಲ್ಯಾಡಿ ಇದರ ಧರ್ಮಗುರುಗಳಾದ ವಂ.ಫಾ.ಶಾಜಿ ಮಾತ್ಯು ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.

Leave a Reply

You May Have Missed

error: Content is protected !!