ಕೊಕ್ಕಡದಲ್ಲಿ 68ನೇ ವರುಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

ಕೊಕ್ಕಡದಲ್ಲಿ 68ನೇ ವರುಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

ಕೊಕ್ಕಡ: ವಿಶ್ವ ಹಿಂದೂ ಪರಿಷದ್ ಕೊಕ್ಕಡ, ಶ್ರೀ ರಾಮ ಸೇನಾ ಟ್ರಸ್ಟ್(ರಿ) ಕೊಕ್ಕಡ 68ನೇ ವರುಷದ ಸಾರ್ವಜನಿಕ ನಗರ ಭಜನಾ ಸಪ್ತಾಹ ನ.7ರಿಂದ ನ.13ರವರೆಗೆ ನಡೆಯಲಿದೆ.

ನ.7ರಂದು ಸಂಜೆ 7:00ಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು. ನ.8ರಿಂದ 13ರ ವರೆಗೆ ಪ್ರತಿದಿನ ಕೊಕ್ಕಡ ಶ್ರೀರಾಮ ಭಜನಾ ಮಂದಿರದಲ್ಲಿ ಭಜನೆ ಆರಂಭಗೊಂಡು ನಗರ ಸಂಚಾರದಿಂದ ಮುಕ್ತಾಯಕೊಳ್ಳುವುದು.

ನ.8ರಂದು ಮಧ್ಯಾಹ್ನ 1.00 ಗಂಟೆಗೆ ಕೊಕ್ಕಡದಿಂದ ಹೊರಟು ದೇವರ ಮೂರ್ತಿಯನ್ನು ದಿ.ಪುರುಷೋತ್ತಮ ನಾಯಕ್ ಬರ್ಗುಳ ಶಿಶಿಲ ಮನೆಯಿಂದ ಕೊಕ್ಕಡಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವು ನಡೆಯಲಿದೆ. ನ.12ರಂದು ಸಂಜೆ 6ಕ್ಕೆ ಆರಂಭಗೊಂಡು ಮರುದಿನ ಬೆಳಗ್ಗೆ 6 ಗಂಟೆಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಓಂಕಾರ ಗೆಳೆಯರ ಬಳಗ ಕೊಕ್ಕಡ ಇವರ ಪ್ರಾಯೋಜಕತ್ವದಲ್ಲಿ ಆಹ್ವಾನಿತ ತಂಡದ ಕುಣಿತ ಭಜನೆ ಆದಿಶಕ್ತಿ ಭಜನಾ ಮಂಡಳಿ ಪಾಲಾರಗೋಳಿ, ಮರೋಳಿ ಇವರಿಂದ ನಡೆಯಲಿದೆ. ಎಂದು ಶ್ರೀರಾಮ ಸೇನಾ ಟ್ರಸ್ಟ್ (ರಿ), ಕೊಕ್ಕಡ ಇದರ ಅಧ್ಯಕ್ಷರಾದ ಬಾಲಕೃಷ್ಣ ನೈಮಿಷ, ಸೌತಡ್ಕ, ವಿಶ್ವ ಹಿಂದೂ ಪರಿಷತ್ ಕೊಕ್ಕಡ ಅಧ್ಯಕ್ಷರಾದ ಪುರುಷೋತ್ತಮ.ಕೆ, ಕಾರ್ಯದರ್ಶಿ ಶಶಿ ಕೊಕ್ಕಡ ಹಾಗೂ 68ನೇ ವರ್ಷದ ಭಜನಾ ಮಹೋತ್ಸವ ಸಮಿತಿ ಅಧ್ಯಕ್ಷ ದೀಕ್ಷಿತ್ ಕೊಕ್ಕಡ, ಕಾರ್ಯದರ್ಶಿ ಗಣೇಶ್.ಕೆ ದೇವಾಡಿಗ ಕೊಕ್ಕಡ, ಕೋಶಾಧಿಕಾರಿ ಮಹೇಶ್ ಕೊಕ್ಕಡ ಹಾಗೂ ಸರ್ವ ಸದಸ್ಯರ ಸಹಕಾರದಿಂದ ನಡೆಯಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದರು.

Leave a Reply

You May Have Missed

error: Content is protected !!