ಉದನೆ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಕಲರ್ಸ್ ಡೇ ಆಚರಣೆ

ಉದನೆ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಕಲರ್ಸ್ ಡೇ ಆಚರಣೆ

ಉದನೆ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ನಲ್ಲಿ ಕಲರ್ಸ್ ಡೇ ಆಚರಿಸಲಾಯಿತು. ಎಲ್ ಕೆ.ಜಿ, ಯುಕೆಜಿ ಹಾಗೂ ಪ್ರೀ ಕೆ.ಜಿ, ಪುಟಾಣಿಗಳು ಕೆಂಪು, ಹಳದಿ, ನೀಲಿ ಉಡುಗೆ ತೊಟ್ಟು ಬಣ್ಣ ಬಣ್ಣದ ಚಿಟ್ಟೆಗಳಂತೆ ಕಂಗೊಳಿಸಿದರು. ಪುಟಾಣಿಗಳು ತಮ್ಮ ಪುಟ್ಟ ಭಾಷಣದ ಮೂಲಕ ಬಣ್ಣಗಳ ಮಹತ್ವವನ್ನು ತಿಳಿಸಿದರು.

ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ಸಂಯೋಜಕರಾದ ರೆ.ಫಾ.ಜಿಜನ್ ಪುಟಾಣಿಗಳನ್ನು ಅಭಿನಂದಿಸಿದರು‌. ಸೈಂಟ್ ಆಂಟನೀಸ್ ಪ್ರೌಢ ಶಾಲಾ ಮುಖ್ಯಶಿಕ್ಷಕ ಶ್ರೀಧರ ಗೌಡ, ಕಿಂಡರ್ ಗಾರ್ಡನ್ ಮುಖ್ಯಸ್ಥೆ ವಿನೀತಾ ತಂಗಚ್ಚನ್ ಹಾಗೂ ಶಿಕ್ಷಕ ವೃಂದ, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ಎಲ್ಲಾ ಶಿಕ್ಷಕ ವೃಂದ, ಸೈಂಟ್ ಆಂಟನೀಸ್ ಪ್ರೌಢ ಶಾಲೆಯಎಲ್ಲಾ ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ವಿನೀತಾ ತಂಗಚ್ಚನ್ ಸ್ವಾಗತಿಸಿದರು‌. ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನ್ನಮ್ಮ ವಂದಿಸಿದರು‌.

Leave a Reply

You May Have Missed

error: Content is protected !!