ಶಿಶಿಲ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರದಲ್ಲಿ ಶುಕ್ರವಾರ ನೋಂಪಿ

ಶಿಶಿಲ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರದಲ್ಲಿ ಶುಕ್ರವಾರ ನೋಂಪಿ

ಕೊಕ್ಕಡ: ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಜೈನ ಮಠ ಕಾರ್ಕಳ ಇವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಡೆ ಅವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೇರಣೆ ಮಾರ್ಗದರ್ಶನದೊಂದಿಗೆ ಊರ, ಪರಊರ ಸಹೃದಯ ಧರ್ಮಾಭಿಮಾನಿ ಸದ್ಧರ್ಮ ಬಂಧುಗಳ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡು ಪಂಚ ಕಲ್ಯಾಣಗೊಂಡ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ, ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಶುಕ್ರವಾರದಂದು ಭವ್ಯ ಶ್ರಾವಕಿಯರು ನೊಂಪಿಯನ್ನು ಆಡಳಿತ ಮಂಡಳಿಯವರ ಸಹಕಾರದೊಂದಿಗೆ ನೆರವೇರಿಸಿದರು.

ಡಾ.ಜಯಕೀರ್ತಿ ಜೈನ್ ಧರ್ಮಸ್ಥಳ ಅವರ ನೇತೃತ್ವದಲ್ಲಿ ಸಂತೋಷ್ ಕುಮಾರ್ ವಳಂಬಲ, ಭುವನ್ ಜೈನ ಧರ್ಮಸ್ಥಳ, ಸುರಭಿ ಜಯಕುಮಾರ್ ಕಲ್ಲುಗುಡ್ಡೆ, ಪಣಿರಾಜ್ ಜೈನ್ ಕೊಕ್ಕಡ ಮೊದಲಾದವರು ಸಹಕರಿಸಿದ್ದರು, ಪುಷ್ಪರಾಜ ಇಂದ್ರ, ಅರಹಂತ ಇಂದ್ರ ನೋಂಪಿ ಪೂಜೆಯನ್ನು ನೆರವೇರಿಸಿದರು, ಭೋಜನದ ವ್ಯವಸ್ಥೆಯನ್ನು ರೇಷ್ಮಾ ಮತ್ತು ಪಣಿರಾಜ್ ಜೈನ್ ವಹಿಸಿದ್ದರು.

Leave a Reply

You May Have Missed

error: Content is protected !!