ಕೊಕ್ಕಡ: ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ ನೆಲ್ಯಾಡಿ ಶೌರ್ಯ ನಿರ್ವಹಣಾ ವಿಪತ್ತು ಘಟಕ

ಕೊಕ್ಕಡ-ಧರ್ಮಸ್ಥಳ ಹೆದ್ದಾರಿ ಮಧ್ಯೆ ಸೌತಡ್ಕ ಕ್ರಾಸ್ ಬಳಿ ಮರವೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಮಾಹಿತಿ ತಿಳಿದ ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಗಳಾದ ರಮೇಶ್ ಬಾಣಜಾಲು, ಸಂತೋಷ್ ಹೊಸಮಜಲು, ದಿನೇಶ್ ಹಾಗೂ ಕೇಶವ ನೆಲ್ಯಾಡಿ ಸ್ಥಳಕ್ಕೆ ಆಗಮಿಸಿ ಮರವನ್ನು ತೆರೆವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು






















Leave a Reply