ದ್ವಿಚಕ್ರ ವಾಹನಗಳ ನಡುವೆ ಮುಖಮುಖಿ ಢಿಕ್ಕಿ; ಓರ್ವ ಮೃತ್ಯು

ದ್ವಿಚಕ್ರ ವಾಹನಗಳ ನಡುವೆ ಮುಖಮುಖಿ ಢಿಕ್ಕಿ; ಓರ್ವ ಮೃತ್ಯು

ಕಿನ್ನಿಗೋಳಿ ಕಟೀಲು ಹೆದ್ದಾರಿಯ ಉಲ್ಲಂಜೆ ರಸ್ತೆ ಬಳಿ ದ್ವಿಚಕ್ರ ವಾಹನಗಳ ನಡುವೆ ಮುಖಮುಖಿ ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರನ್ನು ಪಲಿಮಾರು ನಿವಾಸಿ ರವೀಂದ್ರ (42) ಹಾಗೂ ಗಾಯಗೊಂಡವರನ್ನು ಕಿನ್ನಿಗೋಳಿ ಸಮೀಪದ ಐಕಳ ನಿವಾಸಿ ಕೃಷ್ಣ ಮಾರ್ಲ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ.

ಮೃತ ರವೀಂದ್ರ ಅವರು ಸಹ ಸವಾರ ಕುಮಾರ್ ಎಂಬವರನ್ನು ತಮ್ಮ ಸ್ಕೂಟರ್ ನಲ್ಲಿ ಕಟೀಲು ಕಡೆಗೆ ಹೋಗುತ್ತಿದ್ದಾಗ ಉಲ್ಲಂಜೆ ರಸ್ತೆಯ ಮುಗೆರೋಡಿ ಬಳಿ ಅಡ್ಡರಸ್ತೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ಕ್ರಾಸ್ ಮಾಡಿದ ಸ್ಕೂಟರ್ ಸವಾರ ಕೃಷ್ಣ ಮಾರ್ಲ ತಮ್ಮ ಸ್ಕೂಟರ್ ನ್ನು ಬಲಬದಿಗೆ ಚಲಿಸಿ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಎರಡು ಸ್ಕೂಟರ್ ಗಳು ಜಖಂಗೊಂಡಿದ್ದು ಸ್ಕೂಟರ್ ಸವಾರರಿಬ್ಬರು ಹಾಗೂ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ರವೀಂದ್ರ ಮೂಡಬಿದ್ರೆ ಪುರಸಭೆಯಲ್ಲಿ ಕಳೆದ 20 ವರ್ಷಗಳಿಂದ ಪೌರಕಾರ್ಮಿಕರಾಗಿದ್ದು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

You May Have Missed

error: Content is protected !!