ಶಿಶಿಲ: ಶಾಲೆಗೆ ತೆರಳು ವೇಳೆ ಕಾಡಾನೆ ಪ್ರತ್ಯಕ್ಷ – ಬೈಕಿನಿಂದ ಬಿದ್ದು ಗಾಯ; ಸೊಂಡಿಲಿನಿಂದ ಕೆಡವಿ ಬೈಕ್ ಹಾನಿಗೊಳಿಸಿದ ಕಾಡಾನೆ

ಕೊಕ್ಕಡ: ಶಿಶಿಲ ಸಮೀಪದ ಕಳ್ಳಾಜೆ ನಿವಾಸಿ ವಸಂತ ಎಂಬವರು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಮಕ್ಕಳನ್ನು ಕಳುಹಿಸಲು ಬೈಕಿನಲ್ಲಿ ನ.21ರ ಬೆಳಗ್ಗೆ 8:30ರ ಸುಮಾರಿಗೆ ಬರುತ್ತಿರುವಾಗ ಮಾರ್ಗ ಮಧ್ಯೆ ತಿರುವಿನಲ್ಲಿ ಒಂಟಿ ಸಲಗ ಒಂದು ಪ್ರತ್ಯಕ್ಷಗೊಂಡು. ಭಯದಿಂದ ಬೈಕ್ ನಿಂದ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಬೈಕ್ ಸವಾರ ವಸಂತಗೌಡ ಹಾಗೂ ಅವರ ಮಕ್ಕಳಾದ ಲಾವ್ಯ, ಅದ್ವಿತ್ ಅವರ ಮೊಣಕಾಲು ಹಾಗೂ ಕೈಗಳಿಗೆ ಗಾಯಗಳಾಗಿವೆ.
ಬೈಕ್ ಬಿಟ್ಟು ಓಡುತಿದ್ದಂತೆ ಆನೆಯು ಬಿದ್ದ ಬೈಕ್ ನ ಕಡೆಗೆ ಬಂದು ಸೊಂಡಿಲಿಂದ ಬೈಕ್ ಅನ್ನು ಕೆಡವಿ, ಕಾಲಿಂದ ತುಳಿದು ಸಂಪೂರ್ಣ ಹಾನಿಗೊಳಿಸಿದೆ.
ಸ್ಥಳಕ್ಕೆ ಶಿಬಾಜೆ ಉಪ ವಲಯಾರಣ್ಯಾಧಿಕಾರಿ ರಾಜೇಶ್, ಅರಣ್ಯ ಪಾಲಕ ಸುನಿಲ್ ನಾಯ್ಕ್, ಗಸ್ತು ಅರಣ್ಯ ಪಾಲಕ ಶಿವಾನಂದ ಕುದುರಿ, ಅರಣ್ಯ ವೀಕ್ಷಕರಾದ ಸತೀಶ್ ಹಾಗೂ ವಿನಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರಿಗೆ ಅರಸನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಯಿತು.
ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಭಯಭೀತರಾಗಿದ್ದು ತಕ್ಷಣ ಅರಣ್ಯ ಇಲಾಖೆಯವರು ಆನೆಯನ್ನು ಓಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






















Leave a Reply