ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ

ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ

ಕೊಕ್ಕಡ: ಶಿಬಾಜೆ ಗ್ರಾಮದ ಫತ್ತಿಮಾರು ಎಂಬಲ್ಲಿ ಶನಿವಾರದಂದು ನಸುಕಿನ ವೇಳೆ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ.

ರಾಘವೇಂದ್ರ ಅಭ್ಯಂಕಾರ್ ಎಂಬುವರಿಗೆ ಸೇರಿದ ಕೃಷಿ ತೋಟ ಇದಾಗಿದ್ದು, ಬಾಳೆ, ತೆಂಗು, ಅಡಿಕೆ ಗಿಡಗಳನ್ನು ಹಾನಿ ಮಾಡಿದ್ದು. ಅಪಾರ ನಷ್ಟ ಉಂಟಾಗಿದೆ.

ಪದೇಪದೇ ಆನೆ ದಾಳಿ ನಡೆಸುತ್ತಿರುವುದರಿಂದ ಕಂಗಾಲಾದ ರೈತರು ದಿಕ್ಕು ತೋಚದೆ ಕೃಷಿ ಭೂಮಿಯನ್ನು ಮಾರಾಟ ಮಾಡಲು ಒಂದು ಹಂತಕ್ಕೆ ತಲುಪಿದ್ದಾರೆ. ಅರಣ್ಯ ಇಲಾಖೆಯವರು ಆದಷ್ಟು ಬೇಗ ಈಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ರೈತರು ಆಗ್ರಹಿಸಿದ್ದಾರೆ.

Leave a Reply

You May Have Missed

error: Content is protected !!