ಉಪ್ಪಿನಂಗಡಿ: ಸಹಸ್ರ ಲಿಂಗೇಶ್ವರ ಸನ್ನಿಧಿಯಲ್ಲಿ ಲಿಂಗ ದರ್ಶನ

ಉಪ್ಪಿನಂಗಡಿ: ಸಹಸ್ರ ಲಿಂಗೇಶ್ವರ ಸನ್ನಿಧಿಯಲ್ಲಿ ಲಿಂಗ ದರ್ಶನ

ನೇಸರ ಮಾ.01: ಶಿವರಾತ್ರಿಯಂದು ವರ್ಷಕೊಮ್ಮೆ ಲಿಂಗ ದರ್ಶನ ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯುತ್ತದೆ.ಇಂದು ನೂರಾರು ಭಕ್ತರು ಲಿಂಗ ದರ್ಶನ ಪಡೆದು ಪುನೀತರಾದರು.

ಕ್ಷೇತ್ರದ ನದಿ ಕಿನಾರೆಯಲ್ಲಿ ನಡೆದ “ನಾಮ ಸಂಕೀರ್ತನ” ಕಾರ್ಯಕ್ರಮವನ್ನು ಜಯರಾಮ ನೆಲ್ಲಿತಾಯ ಉದ್ಘಾಟಿಸಿದರು,ಸಹಸ್ರ ಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕರುಣಾಕರ ಶೆಟ್ಟಿ,ಪುತ್ತೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಧನ್ಯಕುಮಾರ್.ರೈ ಬೆಳಿಯೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!