ಕಡಬ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಮಿನಿ ಗೂಡ್ಸ್ ನಡುವೆ ಅಪಘಾತ

ಕಡಬ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಮಿನಿ ಗೂಡ್ಸ್ ನಡುವೆ ಅಪಘಾತ

ನೆಲ್ಯಾಡಿ: ರಾಜ್ಯ ಹೆದ್ದಾರಿ ಉಪ್ಪಿನಂಗಡಿ-ಸುಬ್ರಮಣ್ಯ ಮಧ್ಯೆ ಕಡಬ ಸಮೀಪದ ದೇರಾಜೆ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಮಿನಿ ಗೂಡ್ಸ್ ನಡುವೆ ನ.24ರಂದು ಅಪಘಾತ ಸಂಭವಿಸಿದೆ.

ಕಡಬದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಬಲ್ಯ ದಿಂದ ಕಡಬದ ಕಡೆಗೆ ಬರುತ್ತಿದ್ದ ಬಲ್ಯ ನಿವಾಸಿ ಗಿರೀಶ್.ರೈ ಎಂಬುವರಿಗೆ ಸೇರಿದ ಮಿನಿ ಗೂಡ್ಸ್ ನಡುವೆ ಅಪಘಾತ ಉಂಟಾಗಿದೆ.

ಅಪಘಾತದಲ್ಲಿ ಬಸ್ ನ ಗಾಜು ಹಾಗೂ ಮುಂಭಾಗಕ್ಕೆ ಹಾನಿಯಾಗಿದ್ದು, ಮಿನಿ ಗೂಡ್ಸ್ ವಾಹನದ ಒಂದು ಬದಿಯಲ್ಲಿ ಸಂಪೂರ್ಣ ಹಾನಿಯಾಗಿದೆ.

Leave a Reply

You May Have Missed

error: Content is protected !!