ಕುಟ್ರುಪಾಡಿ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಲ್ಸಮ್ಮ.ಎ.ಜೆ. 109 ಮತಗಳ ಅಂತರದಿಂದ ಗೆಲುವು

ಕುಟ್ರುಪಾಡಿ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಲ್ಸಮ್ಮ.ಎ.ಜೆ. 109 ಮತಗಳ ಅಂತರದಿಂದ ಗೆಲುವು

ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯಿತಿ ನಲ್ಲಿ ತೆರವಾದ 3ನೇ ವಾರ್ಡಿಗೆ ಉಪಚುನಾವಣೆ ನಡೆದಿದ್ದು. ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಲ್ಸಮ್ಮ.ಎ.ಜೆ ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಲಿಯಮ್ಮ ಅವರ ವಿರುದ್ಧ 109 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಲ್ಸಮ್ಮ.ಎ.ಜೆ. ಅವರು 312 ಮತಗಳನ್ನು ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಲಿಯಮ್ಮ ಅವರು 203 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 526 ಮತಗಳ ಪೈಕಿ 11 ಮತಗಳು ತಿರಸ್ಕಾರಗೊಂಡು 515 ಮತಗಳು ಚಲಾವಣೆಗೊಂಡಿವೆ.

Leave a Reply

You May Have Missed

error: Content is protected !!