ಅಪ್ಪ ಬೈಕ್ ಕೊಡಿಸಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ!

ಅಪ್ಪ ಬೈಕ್ ಕೊಡಿಸಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ!

ಅಪ್ಪ ಬೈಕ್ ಕೊಡಿಸಲಿಲ್ಲ ಎಂದು ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಕಾಸ್.ಆರ್ (20) ಎಂದು ಗುರುತಿಸಲಾಗಿದೆ. ಯುವಕ ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದ. ಹಣದ ಅಡಚಣೆಯಿಂದ ಪೋಷಕರಿಗೆ ಬೈಕ್ ಕೊಡಿಸಲು ಆಗಿರಲಿಲ್ಲ.

ಇದೇ ವಿಚಾರಕ್ಕೆ ಯುವಕ ಮಾನಸಿಕವಾಗಿ ಕುಗ್ಗಿ ತಂದೆ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಅಲ್ಲೇ ಆತ ವಿಷ ಸೇವಿಸಿದ್ದಾನೆ.

ತಕ್ಷಣ ಗ್ರಾಮಸ್ಥರು ಆತನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಮತ್ತು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.

Previous post

ಉಪ್ಪಿನಂಗಡಿ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಆಸ್ಪತ್ರೆಗೆ ಸೇರಿಸಿದ ನಿರ್ವಾಹಕ

Next post

ತರಗತಿಗೆ ಪದೇ ಪದೇ ಗೈರು – ಬುದ್ಧಿ ಹೇಳಿದ್ದಕ್ಕೆ ಪ್ರಿನ್ಸಿಪಾಲರ ತಲೆಗೆ ಗುಂಡಿಕ್ಕಿ ಹತ್ಯೆಗೈದ ವಿದ್ಯಾರ್ಥಿ!

Leave a Reply

You May Have Missed

error: Content is protected !!