ಕಾರು ಪಲ್ಟಿ: ತಾಯಿ, ಮಗಳು ಅಪಾಯದಿಂದ ಪಾರು

ಕಾರು ಪಲ್ಟಿ: ತಾಯಿ, ಮಗಳು ಅಪಾಯದಿಂದ ಪಾರು

ಕಾರೊಂದು ಹೆದ್ದಾರಿ ಬದಿಯ ತಡೆಬೇಲಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಪಾರಾಗಿದ್ದಾರೆ.

ಮಂಗಳೂರಿನ ಪಿ.ಜಿ. ಒಂದರಲ್ಲಿ ವಾಸ್ತವ್ಯವಿರುವ ಬೆಳಾರಾಣಿ(49) ಮತ್ತು ಅವರ ಪುತ್ರಿ ಅಕ್ಷ ಎಲ್.ಪಟೇಲ್ ಗಾಯಗೊಂಡವರು.

ಬೆಳಾರಾಣಿ ಅವರು ಕಾರಿನಲ್ಲಿ ಪುತ್ರಿಯೊಂದಿಗೆ ಮೈಸೂರು– ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.

ನಿಯಂತ್ರಣ ಕಳೆದುಕೊಂಡ ಕಾರು ಬೈಪಾಸ್ ರಸ್ತೆಯ ಅಲ್ಯುಮಿನಿಯಂ ತಡೆಬೇಲಿಗೆ ಡಿಕ್ಕಿ ಹೊಡೆದು ತಲೆಕೆಳಗಾಗಿ ರಸ್ತೆ ಪಕ್ಕದ ಕೆಳಭಾಗಕ್ಕೆ ಪಲ್ಟಿಯಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!