ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಪ್ರತಿಭಾ ಪುರಸ್ಕಾರ

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಪ್ರತಿಭಾ ಪುರಸ್ಕಾರ

ಕೊಕ್ಕಡ: ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ನ ಪ್ರತಿಭಾ ಪುರಸ್ಕಾರವು ಕಾಲೇಜಿನ ಪ್ರಾಚಾರ್ಯರಾದ ರಾಮಯ್ಯ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜ.03ರಂದು ನಡೆಯಿತು.

ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಧೀರ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಿದರು ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜು ನ ಪ್ರಾಚಾರ್ಯರಾದ ವಿಶ್ವನಾಥ.ರೈ ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀರಂಗ ದಾಮ್ಲೆ ಮತ್ತು ಸರಕಾರಿ ಪ್ರೌಢ ಶಾಲಾ ಅರಸಿನಮಕ್ಕಿ ಮುಖ್ಯಶಿಕ್ಷಕಿ ಮಂಜುಳಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರವನ್ನು ಉಪನ್ಯಾಸಕರಾದ ರಮಣಿ, ಉಷಾ, ರೇಷ್ಮಾ, ಸಂಪ್ರೀತಾ, ರಶ್ಮಿತಾ ವಾಚಿಸಿದರು ಪವಿತ್ರ. ಪಿ.ಎಸ್ ಸ್ವಾಗತಿಸಿದರು, ನಿವೇದಿತಾ ವಂದಿಸಿದರು. ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

You May Have Missed

error: Content is protected !!