ನೆಲ್ಯಾಡಿ: ಗುತ್ತಿನ ಮನೆ ಕಮಲರವರ ಶ್ರದ್ದಾಂಜಲಿ ಸಭೆ

ನೆಲ್ಯಾಡಿ: ಗುತ್ತಿನ ಮನೆ ಕಮಲರವರ ಶ್ರದ್ದಾಂಜಲಿ ಸಭೆ

ನೆಲ್ಯಾಡಿ:ಡಿ.31ರಂದು ನಿಧನರಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಗುತ್ತಿನಮನೆ ಮಾಧವ ಗೌಡ ಅವರ ಪತ್ನಿ ಕಮಲ(75ವ)ಅವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಜ.12ರಂದು ಗುತ್ತಿನಮನೆಯಲ್ಲಿ ನಡೆಯಿತು.

ಕಮಲ ಅವರ ಪುತ್ರ ರವಿಪ್ರಸಾದ್‌ ಅವರು ಅಮ್ಮನ ಜೊತೆ ಕಳೆದ ನೆನಪುಗಳನ್ನು ಮತ್ತು ಅವರ ಒಡನಾಟಗಳ ಕುರಿತಾಗಿ ಮಾತನಾಡಿ ಭಾವುಕರಾದರು. ನಂತರ ನವ್ಯ ಪ್ರಸಾದ್‌ರವರು ಗುತ್ತಿನ ಮನೆಯ ಧ್ರುವತಾರೆ ಎಂಬ ಶೀರ್ಷಿಕೆಯಡಿ ಕಮಲ ಅವರ ಜೀವನ ಚರಿತ್ರೆಯನ್ನು ತನ್ನ ಸ್ವರಚಿತ ಕವನದ ಮೂಲಕ ವಾಚನ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಸುಂದರ ಗೌಡ ಪುಡಿಕೆತ್ತು ಕನ್ಯಾಡಿ ಅವರು ಮಾತನಾಡಿ, ಮುಕ್ಕೋಟಿ ದೇವತೆಗಳ ಗುಣಗಳನ್ನು ಹೊಂದಿದ್ದ ಕಮಲ ಅವರು ಅದೆಷ್ಟೋ ಜನರಿಗೆ ಅನ್ನಪೂರ್ಣೇಶ್ವರಿಯಾಗಿದ್ದರು. ಅವರು ಅವಿಭಕ್ತ ಕುಟುಂಬದಲ್ಲಿದ್ದರೂ ಅಚ್ಚುಕಟ್ಟಾಗಿ ಎಲ್ಲಾ ಪರಿಸ್ಥಿತಿ ನಿಭಾಯಿಸಿದ್ದರು ಎಂದರು. ಜಯಂತಿ ಬಿ.ಯಂ.ಗರಡಿ ಅವರು ಕಮಲ ಅವರ ಜೊತೆಗೆ ಕಳೆದ ನೆನಪುಗಳನ್ನು ಮೇಲುಕು ಹಾಕುತ್ತ ನಾವೆಲ್ಲರೂ ಒಂದೇ ಎಂಬ ಸೋದರ ವಾತ್ಸಲ್ಯವಿತ್ತು. ಮಾತೃ ಹೃದಯಿಯ ಮಹಾನ್ ಮಾತೆಯಾಗಿದ್ದರು ಎಂದು ಹೇಳಿದರು.

ಗುಡ್ಡಪ್ಪ ಗೌಡ ಬಲ್ಯ ಅವರು ಮಾತನಾಡಿ, ಕಮಲ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಅವರ ಒಳ್ಳೆಯತನಕ್ಕೆ ಯಾರು ಸರಿಸಾಟಿ ಇಲ್ಲ. ನಮ್ಮೆಲ್ಲರ ಮನದಲ್ಲಿ ಎಂದೆಂದೂ ಅಜರಾಮರ ಆಗಿರುತ್ತಾರೆ ಎಂದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.

ಮೃತರ ಪತಿ ಮಾಧವ ಗೌಡ ಗುತ್ತಿನಮನೆ, ಪುತ್ರಿಯರಾದ ಸುನಂದಾ, ಸುಮಿತ್ರಾ, ಸ್ವರ್ಣಲತಾ, ಅಳಿಯಂದಿರಾದ ರತ್ನಾಕರ, ಬಾಲಕೃಷ್ಣ, ಪ್ರವೀಣ, ಪುತ್ರ ರವಿಪ್ರಸಾದ್, ಸೊಸೆ ಸೌಮ್ಯ, ಮೊಮ್ಮಕ್ಕಳಾದ ವರ್ಷ, ಪ್ರೇಕ್ಷ, ಶ್ರೇಷ್ಠ, ವೀಕ್ಷಾ, ಸೃಷ್ಟಿ, ಖುಷಿ, ಋತ್ವಿಕ್ ಮತ್ತು ಗುತ್ತಿನಮನೆ ಕುಟುಂಬಸ್ಥರು, ಬಂಧುಮಿತ್ರರು ಪಾಲ್ಗೊಂಡಿದ್ದರು.

  •  

Leave a Reply

You May Have Missed

error: Content is protected !!