Uppinangady: ಗಾಂಜಾ ಸಹಿತ ಓರ್ವನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

Uppinangady: ಗಾಂಜಾ ಸಹಿತ ಓರ್ವನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ರಿಕ್ಷಾವೊಂದರಲ್ಲಿ ಸಾಗಿಸುತ್ತಿದ್ದ ಒಂದೂವರೆ ಕೆಜಿ ತೂಕದ ಗಾಂಜಾವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು, ಆರೋಪಿಯನ್ನು ಮಾಲು ಸಹಿತ ಗುರುವಾರ ಬಂಧಿಸಿದ್ದಾರೆ.

ಉಪ್ಪಿನಂಗಡಿ ಎಸ್‌ಐ ಅವಿನಾಶ್‌.ಎಚ್‌. ಮತ್ತವರ ತಂಡ 34ನೇ ನೆಕ್ಕಿಲಾಡಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳದ ಕಡೆಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ರಿಕ್ಷಾವನ್ನು ನಿಲ್ಲಿಸಲು ಸೂಚಿಸಲಾಗುತ್ತದೆ. ಆದರೆ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಅಬ್ದುಲ್‌ ಸಲೀಂ (35)ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸಾಗಿಸುತ್ತಿದ್ದುದು ತಿಳಿದು ಬಂತು. ನೌಶಾದ್‌ ಎಂಬಾತ ತನಗೆ ಗಾಂಜಾ ನೀಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  •  

Leave a Reply

You May Have Missed

error: Content is protected !!