ಕೊಕ್ಕಡ ಪ್ರಾ.ಕೃ.ಪ.ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

Kokkada

ಕೊಕ್ಕಡ ಪ್ರಾ.ಕೃ.ಪ.ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.27ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ

ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದ ಪಿ. ಕುಶಾಲಪ್ಪ ಗೌಡ, ವಿಠಲ ಬಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಮಹಾಬಲ ಶೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುನಿಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಚಂದ್ರ ಪಿ., ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಪ್ರೇಮಾವತಿ, ಶ್ರೀಮತಿ ಅಶ್ವಿನಿ, ಪ. ಪಂಗಡ ಕ್ಷೇತ್ರದಿಂದ ವಿಶ್ವನಾಥ, ಪ.ಜಾತಿ ಕ್ಷೇತ್ರದಿಂದ ಮುತ್ತಪ್ಪ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲನ್ನು ಕಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜೆ. ಗೋಪಾಲ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ನ್ಯಾಯಾಲಯದ ಆದೇಶದ ಬಳಿಕ ಘೋಷಣೆ:
ಸಹಕಾರಿ ಸಂಘದ 2 ಮಹಾಸಭೆಗೆ ಗೈರು ಹಾಜರಾದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ಪಿಟಿಷನ್‌ನಂತ ನ್ಯಾಯಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ ಸದಸ್ಯರು ಮತ ಚಲಾಯಿಸಿದ್ದು ಆ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಎಣಿಕೆಯನ್ನು ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.

  •  

Leave a Reply

You May Have Missed

error: Content is protected !!