ವೇಣೂರು ಸ.ಪ.ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ನೆರವು

ವೇಣೂರು ಸ.ಪ.ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ನೆರವು

ಬೆಳ್ತಂಗಡಿ: ವೇಣೂರು ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು 1 ಲಕ್ಷ ರೂ.ಅನುದಾನ ಮಂಜೂರಾತಿ ನೀಡಿದ್ದಾರೆ.

ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ದಯಾನಂದ ಸರ್,ವಲಯ ಮೇಲ್ವಿಚಾರಕಿ ಶಾಲಿನಿ, ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್.ಕೆ.ಎಸ್ ಇವರು ಶಾಲಾ ಸಮಿತಿಯವರಿಗೆ ವಿತರಿಸಿದರು.

ಉಪಪ್ರಾಂಶುಪಾಲರು ವೆಂಕಟೇಶ್.ಎಸ್. ತುಳುಪುಳೆ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್ ಮೂಡುಕೋಡಿ, ನೆಲ್ಸನ್ ಹೆರಾಲ್ಡ್, ಸುಕನ್ಯಾ ಪ್ರಭು, ಜ್ಯೋತಿ ಜೂಲಿಯೆಟ್ ಡಿ’ಸೋಜ, ಸಂಧ್ಯಾ ಜೈನ್, ಸುಶೀಲಾ, ಪ್ರೇಮಾ ಕೆ, ಅನುಸೂಯ ಫಾಟಕ್, ಸಂಧ್ಯಾ, ಲೋಕಯ್ಯ ಎಸ್, ಹಾಗೂ ಮಂಜುನಾಥ, ವೇಣೂರು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರಾದ ಪದ್ಮಪ್ಪ ಹಾಗೂ ಸುಚಿತ್ರ ಹೆಗ್ಡೆ, ಉಪಾಧ್ಯಕ್ಷರು ಹರಿಪ್ರಸಾದ್, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು

  •  

Leave a Reply

You May Have Missed

error: Content is protected !!