ಕಾಂಚನ-ನಡ್ಪ ದೇವಸ್ಥಾನದಲ್ಲಿ ದೈವಗಳ ನೇಮೋತ್ಸವ

ಕಾಂಚನ-ನಡ್ಪ ದೇವಸ್ಥಾನದಲ್ಲಿ ದೈವಗಳ ನೇಮೋತ್ಸವ

ನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆಯ ಬಳಿಕ ದೈವಗಳ ನೇಮೋತ್ಸವ ರಾತ್ರಿ ನಡೆಯಿತು.

ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ ಮತ್ತು ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಭಕ್ತರಿಗೆ ದೇವರ ಪ್ರಸಾದ ವಿತರಿಸಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಿತು.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನ ನಡೆಯಿತು. ದೇವಸ್ಥಾನದ ಅರ್ಚಕರೂ, ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ, ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಟ್ರಸ್ಟ್ ನ ಅಧ್ಯಕ್ಷ ಶ್ರೀಧರ ಗೌಡ ಶ್ರೀಹರಿ ನಡ್ಪ, ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎಸ್. ನೆಕ್ಕರಾಜೆ, ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕರಾದ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿ ಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಲೋಕೇಶ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಪದಾಧಿಕಾರಿಗಳು, ಸದಸ್ಯರು, ಧನು ಪೂಜಾ ಸಮಿತಿ ಸದಸ್ಯರು, ಶ್ರೀ ವಿಷ್ಣುಮೂರ್ತಿ ಶಾಶ್ವತ ಮಹಾಸಮಿತಿ, ಶ್ರೀ ವಿಷ್ಣುಮೂರ್ತಿ ಶಾಶ್ವತ ಉಪಸಮಿತಿ ಸದಸ್ಯರು ಸೇರಿದಂತೆ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!