Nellyady: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕೆ.ವೈ ಆಯ್ಕೆ

Nellyady

Nellyady: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕೆ.ವೈ ಆಯ್ಕೆ

ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಐಸಿಟಿ ಎಜುಕೇಶನ್ ಹಾಲ್‌ನಲ್ಲಿ ಯಶಸ್ವಿಯಾಗಿ ಜರುಗಿತು. ನಿಕಟ ಪೂರ್ವಾಧ್ಯಕ್ಷ ನಾರಾಯಣ ಬಲ್ಯ ಅವರ ನೇತೃತ್ವದಲ್ಲಿ, ಅಧ್ಯಕ್ಷ ಶೀನಪ್ಪ ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಕಾಶ್ ಕೆ.ವೈ ಅವರನ್ನು ನೂತನ ಅಧ್ಯಕ್ಷರಾಗಿ, ಉಲ್ಲಾಹನ್.ಪಿ.ಎಂ.ಕಾರ್ಯದರ್ಶಿಯಾಗಿ, ಮೋಹನ್ ಕುಮಾರ್.ಡಿ ಕೋಶಾಧಿಕಾರಿಯಾಗಿ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಚಂದ್ರಶೇಖರ ಬಾಣಜಾಲು ಮತ್ತು ಪ್ರಶಾಂತ್ ಸಿ.ಎಚ್, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ. ನಿರ್ದೇಶಕರಾಗಿ ಅಬ್ರಹಾಂ ವರ್ಗೀಸ್, ನಾರಾಯಣ ಬಲ್ಯ, ಜಾನ್ ಪಿ.ಎಸ್ ಮತ್ತು ವಿ.ಆರ್. ಹೆಗ್ಡೆ ಅವರು ನೂತನ ತಂಡದಲ್ಲಿ ಸ್ಥಾನ ಪಡೆದರು. ಶೀನಪ್ಪ.ಎಸ್ ಅವರನ್ನು ನಿಕಟ ಪೂರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ನಿರ್ದೇಶಕರಾದ ಡಾ.ಸದಾನಂದ ಕುಂದರ್ ಅವರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಹಾರೈಕೆ ಸಲ್ಲಿಸಿದರು.

  •  
Previous post

Dharmasthala: ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ: ಧರ್ಮಸ್ಥಳ-ಬೆಂಗಳೂರು ಹೆದ್ದಾರಿ ಬದಿಯ 19 ಅಂಗಡಿಗಳನ್ನು ಗ್ರಾ.ಪಂ.ಯಿಂದ ತೆರವು

Next post

ಡೆಂಗ್ಯೂ ದಿನಾಚರಣೆ ಹಿನ್ನೆಲೆ: ನೆಲ್ಯಾಡಿಯಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ಸೊಳ್ಳೆ ಪರದೆ ವಿತರಣೆ

Leave a Reply

You May Have Missed

error: Content is protected !!