ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

Dharmasthala

ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

ಬೆಳ್ತಂಗಡಿ: ಪಂಜಾಬ್‌ನಲ್ಲಿ ನಡೆದ ದುರಂತ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಆಕಾಂಕ್ಷ ಎಸ್ ನಾಯರ್(22) ಮೃತದೇಹ ಇಂದು ಧರ್ಮಸ್ಥಳಕ್ಕೆ ತಲುಪಿದೆ.

ಡೆಲ್ಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದ ಆಕಾಂಕ್ಷ ಮೇ 17 ರಂದು ಪಂಜಾಬ್‌ನ ತನ್ನ ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ತನಿಖೆ ಮುಂದುವರಿದಿದ್ದು, ಶವ ಪರೀಕ್ಷಾ ಪ್ರಕ್ರಿಯೆ ಮುಗಿದ ಬಳಿಕ ಆಕಾಂಕ್ಷ ಅವರ ಮೃತದೇಹವನ್ನು ಮೇ 21 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೊಳಿಯಾರ್ ನಿವಾಸಕ್ಕೆ ತರಲಾಯಿತು.

  •  

Leave a Reply

You May Have Missed

error: Content is protected !!