ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ಗೌರವ

Nellyadi

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ಗೌರವ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವತಿಯಿಂದ 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಸೇಬಾಷ್ಟಿಯನ್ ವಳ್ಳೋಪ್ಪಳ್ಳಿ ಸಭಾಂಗಣದಲ್ಲಿ ಜರುಗಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 617 ಅಂಕಗಳೊಂದಿಗೆ ರಾಜ್ಯದ ಎಂಟನೇ ಸ್ಥಾನಗಳಿಸಿದ ಗಳಿಸಿದ ಜೇಫಿನ್ ಜೋನ್ಸನ್ (ಪುಳಿಕ್ಕಲ್), 612 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ ರೇಖಿಲ್ ಎಂಬವರು ಸನ್ಮಾನಿತರಾದರು.

ದ್ವಿತೀಯ ಪಿಯುಸಿ ವಿಭಾಗದಲ್ಲಿ ಸನುಷ ಕೊಳಂಗರಾತ್ ಹಾಗೂ ಆಷ್ಟನ್ ತೆಕ್ಕೆಕ್ಕೂಟ್ಟ್ ಸಾಧನೆಯಿಗಾಗಿ ಸನ್ಮಾನಿಸಲ್ಪಟ್ಟರು.

ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಗುರುಗಳು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಮುಂದಿನ ಶಿಕ್ಷಣ ಜೀವನದಲ್ಲೂ ಯಶಸ್ಸು ಪಡೆಯಲಿ ಎಂಬ ಆಶಯವನ್ನು ಹಿರಿಯರು ವ್ಯಕ್ತಪಡಿಸಿದರು.

  •  

Leave a Reply

You May Have Missed

error: Content is protected !!