ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

nellyadyi

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

ನೆಲ್ಯಾಡಿ: ನೆಲ್ಯಾಡಿಯ ಹೃದಯವಾಗದಲ್ಲಿ ಕಾರ್ಯಾಚರಿಸುತ್ತಿದ್ದ ‘ಅಮ್ಮ ಕ್ಯಾಂಟೀನ್’ ಮಾಲಕ ಗಿರೀಶ್ ಪೂಜಾರಿ (38) ಇಂದು(ಸೋಮವಾರ ) ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಮೂಲತಃ ಮಡಂತ್ಯಾರ್ ಬಳಿಯ ದಡ್ಡು ನಿವಾಸಿಯಾಗಿರುವ ಗಿರೀಶ್, ಕಳೆದ 7 ವರ್ಷಗಳಿಂದ ನೆಲ್ಯಾಡಿಯಲ್ಲಿ ‘ಅಮ್ಮ ಕ್ಯಾಂಟೀನ್’ ನಡೆಸುತ್ತಿದ್ದರು. ಸರಳತೆ, ಶುದ್ಧ ಆಹಾರ, ಹಾಗೂ ನಿಜವಾದ ಸೇವಾಭಾವನೆಗಾಗಿ ಪ್ರಸಿದ್ಧಿ ಪಡೆದಿದ್ದ ಈ ಕ್ಯಾಂಟೀನ್ ಸ್ಥಳೀಯರ ವಿಶ್ವಾಸ ಗಳಿಸಿತ್ತು. ಗಿರೀಶ್ ಅವರು ಪತ್ನಿ ಮತ್ತು ಒಂದು ಮಗು ಜೊತೆಗೆ ನೆಲ್ಯಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶನಿವಾರ ದಂದು ಅವರು ತಮ್ಮ ಮೂಲ ಮನೆಗೆ ಹೋಗಿದ್ದು, ಅಲ್ಲಿ ಸೋಮವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಪತ್ನಿ, ಪುತ್ರ, ತಾಯಿ ಹಾಗೂ ಸಹೋದರ-ಸಹೋದರಿಯರು ಇದ್ದಾರೆ.

  •  

Leave a Reply

You May Have Missed

error: Content is protected !!