ಭಾರತೀಯ ಭೂಸೇನೆ ತರಬೇತಿ ಮುಗಿಸಿ ಕಳೆಂಜಕ್ಕೆ ಆಗಮಿಸಿದ ಪುಷ್ಪರಾಜ್ ರವರಿಗೆ ಕೊಕ್ಕಡದಲ್ಲಿ ಸ್ವಾಗತ

Kokkada

ಭಾರತೀಯ ಭೂಸೇನೆ ತರಬೇತಿ ಮುಗಿಸಿ ಕಳೆಂಜಕ್ಕೆ ಆಗಮಿಸಿದ ಪುಷ್ಪರಾಜ್ ರವರಿಗೆ ಕೊಕ್ಕಡದಲ್ಲಿ ಸ್ವಾಗತ

ಕಳೆಂಜ: 2024ನೇ ಸಾಲಿನ ಅಗ್ನಿವೀರ್ ನೇಮಕಾತಿಯಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದ ಪಿಲತ್ತಡಿ ಪುಪ್ಪರಾಜ್ ರವರು ಬೆಂಗಳೂರಿನಲ್ಲಿ ನಡೆದ 6 ತಿಂಗಳ ತರಬೇತಿ ಮುಗಿಸಿ ಇಂದು (ಜೂ.6) ಕಳೆಂಜಕ್ಕೆ ಆಗಮಿಸಿದ ಇವರನ್ನು ಕೊಕ್ಕಡ ರಿಕ್ಷಾ ನಿಲ್ದಾಣದ ಬಳಿ ಕಳೆಂಜ ಹಾಗೂ ಕೊಕ್ಕಡದ ಗ್ರಾಮಸ್ಥರು ಸ್ವಾಗತಿಸಿ, ಮೆರವಣಿಗೆಯ ಮೂಲಕ ಕಳೆಂಜಕ್ಕೆ ಬರಮಾಡಿಕೊಳ್ಳಲಾಯಿತು.

ಇವರು ಶೀಘ್ರದಲ್ಲೇ ಕಾರ್ಗಿಲ್‌ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಲಿದ್ದಾರೆ. ಎಸ್.ಎಸ್.ಎಲ್.ಸಿಯನ್ನು ಶಾಲೆತ್ತಡ್ಕ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ, ಪಿಯುಸಿ ಗುರುದೇವ ಕಾಲೇಜಿನಲ್ಲಿ ಹಾಗೂ ಪ್ರಸನ್ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರೀಷನ್ ಕೋರ್ಸ್ ಮುಗಿಸಿರುವ ಇವರು ಅ.19 ರಂದು ಶಿವಮೊಗ್ಗದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದರು. ಇವರು ಕಳೆಂಜ ಪಿಲತ್ತಡಿ ವಿಶ್ವನಾಥ ಗೌಡ ಮತ್ತು ಸುಮಿತ್ರಾ ದಂಪತಿ ಪುತ್ರ.

  •  

Leave a Reply

You May Have Missed

error: Content is protected !!