ನಿಡ್ಲೆ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Kokkada

ನಿಡ್ಲೆ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ನಿಡ್ಲೆ: ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಅರಿಸಿ ಮುಂದಿನ ತಲೆಮಾರಿಗೆ ಹಸಿರು ನುಡಿ ಬಿತ್ತುವ ನಿಟ್ಟಿನಲ್ಲಿ ನಿಡ್ಲೆ ಪ್ರೌಢ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು.

ಉಪ್ಪಿನಂಗಡಿ ವಲಯ ಅರಣ್ಯ ವಿಭಾಗದ ಪ್ರೊಫೆಷನಲ್ ಎ.ಸಿ.ಎಫ್ ಹಸ್ತ ಶೆಟ್ಟಿಯವರು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಸಿಗಳನ್ನು ಅರಣ್ಯ ಇಲಾಖೆ ವಿತರಿಸಿ, “ನೀವು ನೆಟ್ಟ ಸಸಿಯೇ ಭವಿಷ್ಯದಲ್ಲಿ ಹಸಿರು ಕರ್ನಾಟಕಕ್ಕೆ ನಾಂದಿ ಹಾಡಲಿದೆ” ಎಂದು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ತಾತ್ತ್ವಿಕತೆಯನ್ನು ಬಿತ್ತಿದರು.

ಕಾರ್ಯಕ್ರಮದಲ್ಲಿ ಕೊಕ್ಕಡ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ನಿಡ್ಲೆ ಗಸ್ತು ಅರಣ್ಯಪಾಲಕ ಸುನಿಲ್ ನಾಯ್ಕ್, ಶಾಲಾ ಎಸ್.ಡಿ.ಎಂ.ಸಿ ಸದಸ್ಯ ಲಕ್ಷ್ಮಣ್, ಶಾಲಾ ಮುಖ್ಯಶಿಕ್ಷಕಿ ಶಾಂತ ಶೆಟ್ಟಿ, ನಿವೃತ್ತ ಶಿಕ್ಷಕ ರಾಜ್ ಗುರು ಹೆಬ್ಬಾರ್, ಶೌರ್ಯ ವಿಪತ್ತು ತಂಡದ ಸದಸ್ಯರು, ಅರಣ್ಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದರು.

  •  

Leave a Reply

You May Have Missed

error: Content is protected !!