ಮಾವಿನಕಟ್ಟೆ – ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ಕೇಳಿದ್ದಕ್ಕೆ ಯುವತಿಗೆ ಹಲ್ಲೆ – ಪ್ರಕರಣ ದಾಖಲು

ಕುಂದಾಪುರ

ಮಾವಿನಕಟ್ಟೆ – ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ಕೇಳಿದ್ದಕ್ಕೆ ಯುವತಿಗೆ ಹಲ್ಲೆ – ಪ್ರಕರಣ ದಾಖಲು

ಕುಂದಾಪುರ : ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಚಾರಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವತಿಗೆ ಹಲ್ಲೆ ಮಾಡಿದ ಘಟನೆ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಮೆಡಿಕಲ್‌ ಶಾಪ್‌ ನಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವತಿಯನ್ನು ಲಕ್ಷ್ಮೀ ಎಂದು ಗುರುತಿಸಲಾಗಿದೆ.

ಯಾಸ್ಮಿನ್‌ ಹಲ್ಲೆಗೈದ ಆರೋಪಿ. ಮಾವಿನಕಟ್ಟೆಯ ಮೆಡಿಕಲ್‌ಗೆ ಬಂದಿದ್ದ ಆ ಮಹಿಳೆ ಔಷಧ ಖರೀದಿಸಿ 500 ರೂ. ಕೊಟ್ಟಳು. ಚಿಲ್ಲರೆ ಇಲ್ಲ, ಕೊಡಿ ಎಂದ ಯುವತಿ ಹೇಳಿದ್ದಾಳೆ. ಆದರೆ ಯಾಸ್ಮಿನ್‌ ಅದೇ ವಿಚಾರಕ್ಕೆ ಯುವತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದನೆ ನಡೆಸಿದ್ದಾಳೆ ಎನ್ನಲಾಗಿದೆ. ಹಲ್ಲೆಗೊಳಗಾದ ಲಕ್ಷ್ಮೀ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ಭೇಟಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಆರೋಗ್ಯ ವಿಚಾರಿಸಿದರು. ಘಟನೆ ನಡೆದ ಔಷಧ ಅಂಗಡಿಗೂ ಭೇಟಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಘಟನೆ ಕುರಿತಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  •  

Leave a Reply

You May Have Missed

error: Content is protected !!