ತೋಟದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ: 6 ಬೈಕ್‌, 2 ಕಾರು ಸಹಿತ ಮೂವರು ವಶಕ್ಕೆ

ಕಡಬ

ತೋಟದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ: 6 ಬೈಕ್‌, 2 ಕಾರು ಸಹಿತ ಮೂವರು ವಶಕ್ಕೆ

ಕಡಬ : ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ, ಕಡಬ ಪೊಲೀಸ್‌ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದ್ದಾರೆ.

ಈ ವೇಳೆ ಕೃತ್ಯದಲ್ಲಿ ತೊಡಗಿದ್ದ 08 ಜನರು ಪರಾರಿಯಾಗಿದ್ದು, 03 ಜನರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಕಡಬ ನಿವಾಸಿಗಳಾದ ರಾಧಾಕೃಷ್ಣ (52) ಮೋಹನ್ ದಾಸ್ (48) ವೆಂಕಟರಮಣ (30) ಎಂದು ಗುರುತಿಸಲಾಗಿದೆ.

ಸ್ಥಳದಲ್ಲಿದ್ದ 06 ಬೈಕ್, 02 ಕಾರು, 4 ಕೋಳಿ, ಕೋಳಿ ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ ನಗದು ಹಣ 3,560 ರೂ ವಶಪಡಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  •  

Leave a Reply

You May Have Missed

error: Content is protected !!