ಉಜಿರೆ ಎಸ್ ಡಿ ಎಂ ಪ.ಪೂ.ಕಾಲೇಜಿನಲ್ಲಿ ‘ಸಿಂಧೂರ ವನ’ ನಿರ್ಮಿಸಿ ಪರಿಸರ ದಿನ ಆಚರಣೆ

Ujire

ಉಜಿರೆ ಎಸ್ ಡಿ ಎಂ ಪ.ಪೂ.ಕಾಲೇಜಿನಲ್ಲಿ ‘ಸಿಂಧೂರ ವನ’ ನಿರ್ಮಿಸಿ ಪರಿಸರ ದಿನ ಆಚರಣೆ

ಉಜಿರೆ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಪರಿಸರ ದಿನವನ್ನು ‘ಸಿಂಧೂರ ವನ’ ನಿರ್ಮಿಸಿ ಗಿಡ ನೆಡುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಮಾತನಾಡಿ “ಪರಿಸರ ದಿನದಂದು ಗಿಡ ನೆಡುವುದರ ಜೊತೆಗೆ ಅದನ್ನು ಪೋಷಣೆ ಮಾಡುವುದು ಕೂಡ ನಮ್ಮ ಕರ್ತವ್ಯ “ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಧ್ಯೇಯದಂತೆ ಉಜಿರೆ ಕಾಲೇಜು ರಸ್ತೆಯಲ್ಲಿ ಸ್ವಚ್ಛತೆ ಮಾಡಲಾಯಿತು.

ಎನ್ಎಸ್ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಹಾಗೂ ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯರಾದ ಡಾ.ಪ್ರಸನ್ನ ಕುಮಾರ್ ಐತಾಳ್ ರವರು ಉಪಸ್ಥಿತರಿದ್ದರು.

ಎನ್ ಎಸ್ ಎಸ್ ನಾಯಕಿ ರಾಶಿಕ ಮತ್ತು ನಾಯಕ ಸಂಕೇತ್ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

You May Have Missed

error: Content is protected !!