ನೆಲ್ಯಾಡಿ ಆರ್ಲ ಸೆಂಟ್ ಮೇರಿಸ್ ಚರ್ಚ್‍ನಲ್ಲಿ ವಾರ್ಷಿಕ ಮಹಾಸಭೆ | ನೂತನ ಟ್ರಸ್ಟಿಗಳ ಆಯ್ಕೆ

Nellyadi

ನೆಲ್ಯಾಡಿ ಆರ್ಲ ಸೆಂಟ್ ಮೇರಿಸ್ ಚರ್ಚ್‍ನಲ್ಲಿ ವಾರ್ಷಿಕ ಮಹಾಸಭೆ | ನೂತನ ಟ್ರಸ್ಟಿಗಳ ಆಯ್ಕೆ

ನೆಲ್ಯಾಡಿ: ಆರ್ಲ ಸೆಂಟ್ ಮೇರಿಸ್ ಚರ್ಚ್‌ನ ವಾರ್ಷಿಕ ಮಹಾಸಭೆ ನಡೆಯಿತು, 2024-25ನೇ ಸಾಲಿನ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.

ಸಭೆಯಲ್ಲಿ 2025-26ನೇ ಸಾಲಿನ ನೂತನ ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಹೊಸ ಟ್ರಸ್ಟಿಗಳಾಗಿ ಹೃದಿತ್ ಪುದುಮನ, ಜೈಸನ್ ಕುಳತಿನಾಲ್, ಜೋಸ್ಟಿನ್ ನೆನ್ಮಣಿ ಮಟ್ಟಮ್ ಹಾಗೂ ಬಾಬು ಮುಳವೇಲಿ ಪರಂಭಿಲ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ನ್ಯಾಯವಾದಿ ಜೇಮ್ಸ್ ಪುದುಮನ ಮತ್ತು ಲೆಕ್ಕ ಪರಿಶೋಧಕರಾಗಿ ಸೇಬಾಷ್ಟಿಯನ್ ಪುಳಿಕಾಯತ್ ಆಯ್ಕೆಯಾದರು.

ಧರ್ಮಗುರು ವಂ.ಶಾಜಿ ಮಾತ್ಯು ಅವರು ನೂತನ ಟ್ರಸ್ಟಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಭೆಯು ಸಮರ್ಪಕವಾಗಿ ಮುಕ್ತಾಯಗೊಂಡು ಭಕ್ತಾದಿಗಳಲ್ಲಿ ನಂಬಿಕೆ ಮತ್ತು ಉತ್ಸಾಹ ತುಂಬಿದ ಹೊಸ ಚಾಲನೆ ದೊರೆಯಿತು.

  •  
Previous post

ಕೊಕ್ಕಡ: ಅಪಾಯಕಾರಿ ಸ್ಥಳಗಳಲ್ಲಿ ಮನೆ ಹೊಂದಿರುವವರಿಗೆ ನೋಟಿಸ್ ನೀಡಿದ ಗ್ರಾಮ ಪಂಚಾಯತಿ: ಭಾರಿ ಮಳೆಯಾದರೆ ಸ್ಥಳಾಂತರಕ್ಕೆ ಸೂಚನೆ

Next post

ಉದನೆ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಟನ್‌ನಲ್ಲಿ ಪ್ರವೇಶೋತ್ಸವ | ಅಕ್ಷರಾಭ್ಯಾಸ

Leave a Reply

You May Have Missed

error: Content is protected !!