ಪಿಕಪ್ ಗಳ ನಡುವೆ ಅಪಘಾತ : 600 ಲೀಟರ್ ಹಾಲು ರಸ್ತೆಯ ಪಾಲು

Sulya-Accident

ಪಿಕಪ್ ಗಳ ನಡುವೆ ಅಪಘಾತ : 600 ಲೀಟರ್ ಹಾಲು ರಸ್ತೆಯ ಪಾಲು

ಬಾಳಿಲ: ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಇನ್ನೊಂದು ಪಿಕಪ್ ವಾಹನ ಡಿಕ್ಕಿಯಾಗಿ ಹಾಲಿನ ವಾಹನ ಪಲ್ಟಿಯಾದ ಘಟನೆ ಬಾಳಿಲದಲ್ಲಿ ಮಂಗಳವಾರ ಸಂಭವಿಸಿದೆ.

ಹಾಲಿನ ಕ್ಯಾನ್ ಗಳು ಚೆಲ್ಲಾಪಿಲ್ಲಿಯಾಗಿದ್ದು ಸುಮಾರು 600 ಲೀಟರ್ ಹಾಲು ರಸ್ತೆಯ ಪಾಲಾಗಿದೆ. ಚಾಲಕ ಸೈಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

4ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟರ್ ಹಾಲು ತುಂಬಿದ್ದ 20 ಕ್ಯಾನ್ ಗಳನ್ನು ಹೇರಿಕೊಂಡು ಬೆಳ್ಳಾರೆಯತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಹುತೇಕ ಹಾಲು ಚೆಲ್ಲಿ ಹೋಗಿದೆ.

  •  

Leave a Reply

You May Have Missed

error: Content is protected !!