ಉಜಿರೆ ಎಸ್ ಡಿ ಎಂ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜೀವನ ಕೌಶಲ್ಯ ತರಬೇತಿ 

Ujire

ಉಜಿರೆ ಎಸ್ ಡಿ ಎಂ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜೀವನ ಕೌಶಲ್ಯ ತರಬೇತಿ 

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ “ಜೀವನ ಕೌಶಲ್ಯ ತರಬೇತಿ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತರಬೇತುದಾರ ಶ್ರೀಕಾಂತ್ ಪೂಜಾರಿ ಅವರು ಹಾಗೂ ಜೀವನ ಕೌಶಲ್ಯ ತರಬೇತುದಾರರುಮತ್ತು ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿನ ಎನ್ ಎಸ್ ಎಸ್ ಯೋಜನಾಧಿಕಾರಿ ಮಹೇಶ್ ಕುಮಾರ್ ಶೆಟ್ಟಿ, ಜೀವನ ನಿರ್ವಹಣೆ, ಸವಾಲುಗಳನ್ನು ಎದುರಿಸುವ ಕುರಿತು ತರಬೇತಿ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ “ಒಬ್ಬ ವ್ಯಕ್ತಿಯಲ್ಲಿ ಜೀವನ ಕೌಶಲ್ಯ ಬಹಳ ಅವಶ್ಯಕ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದ ಸವಾಲುಗಳನ್ನು ಎದುರಿಸಿ ಬದುಕುವ ಕೌಶಲ್ಯ ಪಡೆದುಕೊಳ್ಳಬೇಕು” ಎಂದು ಹೇಳಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ರಾಜೇಶ್ ಬಿ, ಯೋಜನಾಧಿಕಾರಿಗಳಾದ ವಿಶ್ವನಾಥ್ ಎಸ್ ಉಪಸ್ಥಿತರಿದ್ದರು.

ಸ್ವಯಂಸೇವಕಿ ಸುಪೇಕ್ಷಾ ನಿರೂಪಿಸಿ, ಸ್ವಯಂ ಸೇವಕ ವಿನೋದ್ ಸ್ವಾಗತಿಸಿ ಸ್ವಯಂ ಸೇವಕಿ ದೀಪ್ತಿ ವಂದಿಸಿದರು.

  •  

Leave a Reply

You May Have Missed

error: Content is protected !!