ಬೆಥನಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಯೋಗ ದಿನಾಚರಣೆ

Noojibalthila

ಬೆಥನಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಯೋಗ ದಿನಾಚರಣೆ

ನೂಜಿಬಾಳ್ತಿಲ: ಅಂತರಾಷ್ಟ್ರೀಯ ಯೋಗ ದಿನಾಚರಣೆಯು ನೂಜಿಬಾಳ್ತಿಲದ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಂಸ್ಥೆಯ ನಿರ್ದೇಶಕ ಫಾ.ಆಂಟನಿ ಪಡಿಪುರಕ್ಕಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಯೋಗದ ಶ್ರೇಷ್ಠತೆಯ ಬಗ್ಗೆ ಮಾತನಾಡಿದ ಅವರು, “ಯೋಗ ಎನ್ನುವುದು ಕೇವಲ ದೇಹದ ವ್ಯಾಯಾಮವಲ್ಲ, ಅದು ಮನಸ್ಸು ಹಾಗೂ ಆತ್ಮದ ಶುದ್ಧೀಕರಣವಾಗಿದೆ” ಎಂದು ಹೇಳಿದರು.

ಫಾ.ಲೂಕೋಸ್ ತನಿಯಿಲ್ ಅವರು ಯೋಗದ ಮಹತ್ವವನ್ನು ವಿವರಿಸಿದರು. “ಯೋಗ ಮಾಡಿದವರಿಗೆ ರೋಗವಿಲ್ಲ” ಎಂಬ ಮಾತನ್ನು ಉಲ್ಲೇಖಿಸಿದ ಅವರು, ಪ್ರತಿ ವ್ಯಕ್ತಿಯು ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. “ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ 177ಕ್ಕಿಂತ ಹೆಚ್ಚು ರಾಷ್ಟ್ರಗಳು ಅಂಗೀಕರಿಸಿರುವುದು ಯೋಗದ ಜಾಗತಿಕ ಪ್ರಭಾವದ ಸಾಕ್ಷ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಕಿ ಅನನ್ಯ ಅವರು ಯೋಗದ ನೈತಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ವಿವರಿಸುತ್ತಾ ಯೋಗದ ಸಂಸ್ಕೃತಿಯನ್ನು ಮುಂದುವರಿಸಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು. ಕನ್ನಡ ಉಪನ್ಯಾಸಕಿ ಜಿನಿ ಅವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕರಾದ ಪುನೀತ್ ಮತ್ತು ಮತ್ತಾಯಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಸ್ವಾಗತಿಸಿದರು ಮುಖ್ಯಶಿಕ್ಷಕ ತೋಮಸ್ ವಂದಿಸಿದರು. ವಿದ್ಯಾರ್ಥಿನಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 220 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿಸಿದರು.

  •  

Leave a Reply

You May Have Missed

error: Content is protected !!