ಗೋಳಿತ್ತೊಟ್ಟು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Golithottu

ಗೋಳಿತ್ತೊಟ್ಟು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ನೆಲ್ಯಾಡಿ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು ಜನಸಾಮಾನ್ಯರಿಗೆ ನೀಡುತ್ತಿರುವ ಸಹಕಾರಿ ಸೇವೆಗಳನ್ನು ಕಠಿಣಗೊಳಿಸಿರುವುದನ್ನು ತಕ್ಷಣದಿಂದಲೇ ಕೈ ಬಿಡುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಗೋಳಿತ್ತೊಟ್ಟು, ಕೊಣಾಲು ಹಾಗೂ ಆಲಂತಾಯ ಶಕ್ತಿಕೇಂದ್ರದ ವತಿಯಿಂದ ಗೋಳಿತ್ತೊಟ್ಟು ಗ್ರಾ.ಪಂ.ಮುಂಭಾಗ ಜೂ.23ರಂದು ಬೆಳಿಗ್ಗೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಟಿ.ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪೆ ಅವರು, ಗ್ರಾಮೀಣ ಭಾಗದ ಬಡವರಿಗೆ ನೀಡುತ್ತಿದ್ದ ವಸತಿ ಯೋಜನೆಯ ಮನೆಗಳಿಗೆ ಅನುದಾನ ನೀಡದೆ ಅನೇಕರ ಕನಸಿಗೆ ರಾಜ್ಯ ಸರ್ಕಾರ ತಣ್ಣೀರೆರಚುತ್ತಿದೆ. 9/11 ನಕ್ಷೆಗಳು ಆರು ತಿಂಗಳಾದರೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಮನೆ ದುರಸ್ತಿಗಳಿಗೆ ಕೆಂಪು ಕಲ್ಲು, ಮರಳು, ಜಲ್ಲಿಯಂತಹ ಯಾವುದೇ ಸಾಮಾಗ್ರಿಗಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಜನ ಬೀದಿಗೆ ಬರುವಂತೆ ಆಗಿದೆ. ರಾಜ್ಯಪಾಲರು ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿದರು.

ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮಕ್ಕೆ ಬೇಕಾದ ಅನುದಾನಗಳು ಪೂರೈಕೆ ಆಗುತಿತ್ತು. ಈಗ ಎಲ್ಲಾ ಕೆಲಸ, ಕಾಮಗಾರಿಗಳು ಸ್ಥಗಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಪ್ರದಶದ ಜನರ ಸ್ಥಿತಿ ಅದೋಗತಿಯತ್ತ ತಲುಪಲಿದೆ ಎಂದರು. ಪ್ರತಿಭಟನೆಯ ಬಳಿಕ ಗೋಳಿತ್ತೊಟ್ಟು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮಂಡಲ ಸಮಿತಿ ಸದಸ್ಯ ಕುಶಾಲಪ್ಪ ಗೌಡ ಅನಿಲ ನೇತೃತ್ವ ವಹಿಸಿದ್ದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಹೇಮಲತಾ ಮುರಿಯೇಲು, ಗುಲಾಬಿ ಕಿನ್ಯಡ್ಕ, ಜೀವಿತ ಪೆರಣ, ಜನಾರ್ದನ ಗೌಡ ಪಠೇರಿ, ಪದ್ಮನಾಭ ಪೂಜಾರಿ ಪೆರ್ನಾರು, ಶಿವಪ್ರಸಾದ್ ಶಿವಾರು, ಬಿಜೆಪಿ ಶಕ್ತಿಕೇಂದ್ರದ ಪ್ರಮುಖರಾದ ಕಮಲಾಕ್ಷ ಗೋಳಿತ್ತೊಟ್ಟು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಬಾಬು ನಾಯ್ಕ್ ಅಲಂಗಪೆ, ಜನಾರ್ದನ ಗೌಡ ಶಾಂತಿನಗರ, ಬೂತ್ ಸಮಿತಿ ಅಧ್ಯಕ್ಷರಾದ ದಿನೇಶ್ ಗೌಡ ಬಾಂಕೋಡಿ, ಪ್ರಮುಖರಾದ ಗಣೇಶ್ ಬೊಟ್ಟಿಮಜಲು, ಅಶೋಕ ಸಿ.ಬಿ.ಚಿಲುಮೆ, ಜಗದೀಶ ಅರ್ತಿಗುಳಿ, ಕೇಶವ ಪೂಜಾರಿ ಮುರಿಯೇಲು, ವಿಠಲ ಅಗರ್ತ, ಕರುಣಾಕರ ಅಂಬುಡೇಲು, ಆನಂದ ಶೆಟ್ಟಿ ಮರಂದೆ, ಚಿದಾನಂದ ಗೌಡ ಅನಿಲ, ಸೇಸಪ್ಪ ಗೌಡ ಬಳಕ್ಕ, ಕಮಲಾಕ್ಷ ಅರಂತಬೈಲು, ರಘುನಾಥ ಕುದ್ಕೋಳಿ, ವಿಶ್ವನಾಥ ಮಡಿವಾಳ ಅಗರ್ತ, ಬಾಲಕೃಷ್ಣ ಗೌಡ ಆರಕರೆ, ಪದ್ಮನಾಭ ಪೂಜಾರಿ ಪೆರ್ನಾರು, ಉಮೇಶ್ ಆಚಾರ್ಯ ಹಲಸಿನಕಟ್ಟೆ, ಶೇಖರ ಗೌಡ ಬನತ್ತಕೋಡಿ, ಶೀನಪ್ಪ ಗೌಡ ಬೊಟ್ಟಿಮಜಲು, ನೋಣಯ್ಯ ಗೌಡ ಸಣ್ಣಂಪಾಡಿ, ಲೋಕೇಶ ಅಗರ್ತ ಮತ್ತಿತರರು ಭಾಗವಹಿಸಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

  •  
Previous post

ಶಿಶಿಲ ಶಾಲೆಯ ನೂತನ ಕಟ್ಟಡದ ಕಾಮಗಾರಿ ಬಗ್ಗೆ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಬದುಕು ಕಟ್ಟೋಣ ತಂಡದಿಂದ ಸಮಾಲೋಚನಾ ಸಭೆ

Next post

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪೋಷಕರಿಗೆ “ಪಾಲನೆ ಮತ್ತು ಕೌಟುಂಬಿಕ ಸಂಬಂಧಗಳು” ಮಾಹಿತಿ ಕಾರ್ಯಾಗಾರ

Leave a Reply

You May Have Missed

error: Content is protected !!