ನೆಲ್ಯಾಡಿ: ಬಿರುಗಾಳಿಗೆ ಅಡಿಕೆ, ರಬ್ಬರ್ ಕೃಷಿಗೆ ಹಾನಿ

Nellyadi

ನೆಲ್ಯಾಡಿ: ಬಿರುಗಾಳಿಗೆ ಅಡಿಕೆ, ರಬ್ಬರ್ ಕೃಷಿಗೆ ಹಾನಿ

ನೆಲ್ಯಾಡಿ: ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಅಡಿಕೆ, ರಬ್ಬರ್ ಕೃಷಿಗೆ ವ್ಯಾಪಕ ಹಾನಿಯಾಗಿದೆ.

ಕೊರಮೇರು ನಿವಾಸಿ ರಮೇಶ್ ಗೌಡ ಎಂಬವರ ತೋಟದಲ್ಲಿ 200ಕ್ಕೂ ಹೆಚ್ಚು ಫಸಲು ಭರಿತ ಅಡಿಕೆ ಮರಗಳು ಮುರಿದು ಬಿದ್ದಿವೆ. ಇವರ ಜಾಗದ ಪಕ್ಕದಲ್ಲಿನ ಕೆ.ಇ.ತೋಮಸ್ ಎಂಬವರ 250ಕ್ಕೂ ಹೆಚ್ಚು ರಬ್ಬರ್ ಮರಗಳು ಮುರಿದು ಬಿದ್ದಿವೆ. ಘಟನಾ ಸ್ಥಳಕ್ಕೆ ಇಚ್ಲಂಪಾಡಿ ಗ್ರಾಮದ ಗ್ರಾಮಸಹಾಯಕ ಅನಿಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ತಯಾರಿಸಿದ್ದಾರೆ.

  •  

Leave a Reply

You May Have Missed

error: Content is protected !!