ಶಿಶಿಲೇಶ್ವರ ದೇವಾಲಯದಲ್ಲಿ ರಿಕ್ಷಾ ಚಾಲಕರು ಹಾಗೂ ಊರ ಭಕ್ತಾದಿಗಳಿಂದ ಸ್ವಚ್ಛತಾ ಶ್ರಮದಾನ

Shishila

ಶಿಶಿಲೇಶ್ವರ ದೇವಾಲಯದಲ್ಲಿ ರಿಕ್ಷಾ ಚಾಲಕರು ಹಾಗೂ ಊರ ಭಕ್ತಾದಿಗಳಿಂದ ಸ್ವಚ್ಛತಾ ಶ್ರಮದಾನ

ಶಿಶಿಲ: ತೀವ್ರ ಮಳೆಗೆ ತತ್ತರಿಸಿದ ಶಿಶಿಲೇಶ್ವರ ದೇವಸ್ಥಾನ ಇದೀಗ ಭಕ್ತರ ಶ್ರಮದಾನದಿಂದ ಮತ್ತೆ ಭಕ್ತಿಗೆ ತಯಾರಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇವಾಲಯದ ತಡೆಗೋಡೆ ಜರಿದು ಹಾನಿಗೊಂಡಿತ್ತು. ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಮಳೆನೀರು ನುಗ್ಗಿ ಸಂಪೂರ್ಣ ಕೆಸರು ಮಡುವಾಗಿ ಪರಿವರ್ತನೆಯಾಗಿತ್ತು.

ಈ ಪರಿಸ್ಥಿತಿಯಲ್ಲಿ ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೀವ್ರ ಅಡಚಣೆ ಉಂಟಾಗಿತ್ತು. ಶಿಶಿಲದ ರಿಕ್ಷಾ ಚಾಲಕರು ಹಾಗೂ ಊರಿನ ಭಕ್ತಾದಿಗಳು ಶ್ರಮದಾನದ ಮೂಲಕ ದೇವಾಲಯದ ಒಳಗೆ ಮತ್ತು ಹೊರಗೆ ಜಮಾಯಿಸಿದ್ದ ಕೆಸರನ್ನು ಶ್ರಮದಿಂದ ತೆಗೆದು, ಸ್ಥಳವನ್ನು ಸ್ವಚ್ಛಗೊಳಿಸಿದರು.

  •  

Leave a Reply

You May Have Missed

error: Content is protected !!