ನೆಲ್ಯಾಡಿ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Nellyadi

ನೆಲ್ಯಾಡಿ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ಆಗೋಸ್ಟ್ 8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಪೂರ್ವಭಾವಿ ಸಭೆಯು ಶುಕ್ರವಾರದಂದು ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಐದನೇ  ಬಾರಿಗೆ ಅಧ್ಯಕ್ಷರಾಗಿ ಸುಪ್ರೀತಾ ರವಿಚಂದ್ರ ಹೊಸವಕ್ಲು ಆಯ್ಕೆ,ಉಪಾಧ್ಯಕ್ಷರಾಗಿ ಸುಮನ, ಕಾರ್ಯದರ್ಶಿಯಾಗಿ ಸೌಮ್ಯ ಜಯರಾಜ್, ಕೋಶಾಧಿಕಾರಿ ಸುಮಲತಾ ಸದಸ್ಯರಾಗಿ ಪ್ರಿಯಾ ಕರ್ವೇಲು, ವಿಮಲ ಬೊನ್ಯಸಾಗು, ವಿಶಾಲಾಕ್ಷಿ ಕೊಲ್ಯೊಟ್ಟು, ನಮಿತ ಕೊಲ್ಯೊಟ್ಟು, ಲಲಿತ ಕುಡ್ತಾಜೆ, ಕುಮುದ, ಜಯಂತಿ, ಬೇಬಿ ಸದಾನಂದ, ಗೀತಾ ದೋಂತಿಲ, ಹರಿಣಿ ಮಾದೇರಿ, ಪ್ರೀತಾ ಆಲಂಬಿಲ ನೇಮಕಗೊಂಡರು.

ಸಭೆಗೆ ಶಾಲಾ ಆಡಳಿತ ಮಂಡಳಿಯ ಸದಸ್ಯ ಸುಬ್ರಾಯ ಪುಣಚ, ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಶ್ರೀರಾಮ ಶಿಶು ಮಂದಿರದ ಅಧ್ಯಕ್ಷ ಪುಷ್ಪಲತಾ ಸೇರಿದಂತೆ ಮಾತೆಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ಪೂಜಾ ಸಮಿತಿಯ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

  •  

Leave a Reply

You May Have Missed

error: Content is protected !!