ಗೋಳಿತ್ತೊಟ್ಟು: ಅನಾರೋಗ್ಯದಿಂದ ಬಳಲುತ್ತಿರುವ ರಿಕ್ಷಾ ಚಾಲಕನಿಗೆ ನೆರವು

Golithottu

ಗೋಳಿತ್ತೊಟ್ಟು: ಅನಾರೋಗ್ಯದಿಂದ ಬಳಲುತ್ತಿರುವ ರಿಕ್ಷಾ ಚಾಲಕನಿಗೆ ನೆರವು

ಗೋಳಿತ್ತೊಟ್ಟು: ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ, ಆಟೋ ಚಾಲಕ ಪ್ರಿನ್ಸ್ ರವರಿಗೆ ದಾನಿಗಳಿಂದ ಸಂಗ್ರಹಿಸಿದ 34 ಸಾವಿರ ರೂಪಾಯಿಯನ್ನು ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.

ಪ್ರಿನ್ಸ್ ಅವರ ಕುಟುಂಬವು ಕಡುಬಡತನದ ಕುಟುಂಬವಾಗಿದ್ದು ಪ್ರಿನ್ಸ್ ತನ್ನ ಮನೆಗೆ ಆಧಾರವಾಗಿದ್ದರು. ಪ್ರಿನ್ಸ್ ಅವರ ಅನಾರೋಗ್ಯದಿಂದಾಗಿ ಅವರ ಕುಟುಂಬಕ್ಕೆ ಈಗ ದಿಕ್ಕು ತೋಚದಂತಾಗಿದೆ. ಈ ಸಂದರ್ಭದಲ್ಲಿ ಗೋಳಿತೊಟ್ಟು ಅಸುಪಾಸಿನ ದಾನಿಗಳಿಂದ 34 ಸಾವಿರ ರೂ. ಸಂಗ್ರಹಿಸಿ ಅವರಿಗೆ ಹಸ್ತಾಂತರಿಸಲಾಗಿದೆ. ಜನಾರ್ದನ ಪೆರ್ನಾರ್, ಚಂದ್ರಶೇಖರ್ ಶೆಟ್ಟಿ ಪೆರಣ, ಸಂದೇಶ ಏಡ್ಮೆ, ಚಂದ್ರಶೇಖರ ಆಂಬುಡೆಲು, ಗಣೇಶ್ ಕಲ್ಲಡ್ಕ ಅವರು ಆಸ್ಪತ್ರೆಗೆ ತೆರಳಿ ನೆರವು ಹಸ್ತಾಂತರ ಮಾಡಿದರು.

  •  

Leave a Reply

You May Have Missed

error: Content is protected !!