ಸೌತಡ್ಕ ಕ್ಷೇತ್ರಕ್ಕೆ ಕರ್ನಾಟಕದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ



ಸೌತಡ್ಕ: ರಾಜ್ಯ ಸರಕಾರದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಸೋಮವಾರ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಭೇಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಚಿವರೊಂದಿಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಡಾ. ವೆಂಕಟೇಶ್ ಅವರು ಜೊತೆಗಿದ್ದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಮಣ್ಯ ಶಬರಾಯ ಅವರು ಸಚಿವರಿಗೆ ಶಾಲು ಹಾಕಿ ಗೌರವ ಸೂಚಿಸಿದರು. ಸದಸ್ಯರಾದ ವಿಶ್ವನಾಥ್ ಪೂಜಾರಿ ಕೊಲ್ಲಾಜೆ, ಪ್ರಮೋದ್ ರೆಖ್ಯ, ಗಣೇಶ್ ಕಾಶಿ, ಲೋಕೇಶ್ವರಿ ವಿನಯಚಂದ್ರ ವಲಂಬ್ರ, ಪ್ರಶಾಂತ್ ಮಚ್ಚಿನ ಹಾಗೂ ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಸೌತಡ್ಕ ಸಂರಕ್ಷಣಾ ಸಮಿತಿ ಅಧ್ಯಕ್ಷ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು, ದಯಾನೀಶ, ಮ್ಯಾನೇಜರ್ ರಾಮಕೃಷ್ಣ ಶಬರಾಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
























Leave a Reply