ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಗಂಭೀರ ಗಾಯಗೊಂಡ ಬೈಕ್ ಸವಾರ

ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಗಂಭೀರ ಗಾಯಗೊಂಡ ಬೈಕ್ ಸವಾರ

ನೇಸರ ಮಾ.9: ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಎಂಬಲ್ಲಿ ಬುಧವಾರ ( ಮಾ.9 )ಸಂಜೆ ನಡೆದಿದೆ.

ಗಾಯಗೊಂಡವರನ್ನು ವೇಣೂರಿನ ಕಿರಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕಿರಣ್ ಶೆಟ್ಟಿ ದುಬೈನಲ್ಲಿ ಉದ್ಯೋಗದಲ್ಲಿದ್ದು ಕಳೆದವಾರವಷ್ಟೇ ಊರಿಗೆ ಬಂದಿದ್ದರು. ಕೊಕ್ಕಡದಲ್ಲಿದ್ದ ತನ್ನ ಸ್ನೇಹಿತನನ್ನು ಭೇಟಿಮಾಡುವ ಕಾರಣ ಆಗಮಿಸಿದ್ದರು. ಭೇಟಿ ಬಳಿಕ ವೇಣೂರಿಗೆ ಹಿಂತಿರುಗುವಾಗ ಪಾರ್ಪಿಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಕಿರಣ್ ಶೆಟ್ಟಿಯವರ ಭುಜ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಕೊಕ್ಕಡ ಆಂಬುಲೆನ್ಸ್ ನಲ್ಲಿ ಉಜಿರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous post

ಅರಸಿನಮಕ್ಕಿ: ಶಿವಾನಿ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟದ ಕಚೇರಿ ಉದ್ಘಾಟನೆ

Next post

ಕನ್ನಡ ಚಿತ್ರರಂಗ ಕಂಡ ಮಾನವೀಯ ಗುಣಗಳ ಸಾಕಾರ ಮೂರ್ತಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಅಪ್ಪು ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ

Leave a Reply

You May Have Missed

error: Content is protected !!