ನೆಲ್ಯಾಡಿ: ಬರ್ಚಿನಹಳ್ಳ ಬಳಿ ಲಾರಿ–ಈಚರ್ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ

Nellyadi

ನೆಲ್ಯಾಡಿ: ಬರ್ಚಿನಹಳ್ಳ ಬಳಿ ಲಾರಿ–ಈಚರ್ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಟ್ಯಾಂಕರ್ ಲಾರಿ ಹಾಗೂ ಈಚರ್ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಈಚರ್ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ಈಚರ್ ವಾಹನದ ಚಾಲಕನನ್ನು ಚನ್ನರಾಯಪಟ್ಟಣ ತಾಲೂಕಿನ ನವಿಲುಹೂಸೂರು ಗ್ರಾಮದ ನಿವಾಸಿ ನಟರಾಜ್(48) ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣ ಮಂಗಳೂರಿನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಪ್ಲಾಸ್ಟಿಕ್ ಮಣಿಯನ್ನು ಸಾಗಿಸುತ್ತಿದ್ದ ಈಚರ್ ವಾಹನಕ್ಕೆ ಬರ್ಚಿನಹಳ್ಳದಲ್ಲಿ ಎದುರಿನಿಂದ ಬರುತ್ತಿದ್ದ ಹಾಸನದ ಆಲೂರು ಮೂಲದ ಶಶಿ(26) ಎಂಬವರು ಚಾಲನೆ ನಡೆಸುತ್ತಿದ್ದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಿಂದ ಕೆಲ ಸಮಯ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೈವೇ ಪೆಟ್ರೋಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  •  
Previous post

ಸೌತಡ್ಕ ದೇಗುಲ ಆಸ್ತಿ ಅಕ್ರಮ ವಶ: ಖಾಸಗಿ ಟ್ರಸ್ಟ್ ರದ್ದು ಮಾಡಿ ದೇವಾಲಯಕ್ಕೆ ಆಸ್ತಿ ಹಸ್ತಾಂತರಿಸಿ – ಆಯುಕ್ತರಿಗೆ ಸಂರಕ್ಷಣಾ ವೇದಿಕೆಯ ಮನವಿ

Next post

ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ರಕ್ಷಕ- ಶಿಕ್ಷಕ ಸಂಘದ ಸಭೆ

Leave a Reply

You May Have Missed

error: Content is protected !!