ಕೋಲ್ಪೆ | ಜಮಾಅತ್ ಮುಸ್ಲಿಮರಿಂದ ಮಸೀದಿ ಖತೀಬರಿಗೆ ಕಾರು ಉಡುಗೊರೆ

ಕೋಲ್ಪೆ | ಜಮಾಅತ್ ಮುಸ್ಲಿಮರಿಂದ ಮಸೀದಿ ಖತೀಬರಿಗೆ ಕಾರು ಉಡುಗೊರೆ

ಕಡಬ : ನೆಲ್ಯಾಡಿ ಬಳಿಯ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸಾಕ್ ಫೈಝಿ ಅವರಿಗೆ ಜಮಾಅತ್‌ನ ಮುಸ್ಲಿಮರು ಸೇರಿ ಮಾರುತಿ ವ್ಯಾಗನರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಎಸ್ ಕೆ ಎಸ್ ಎಸ್ ಎಫ್ ಮಾಜಿ ಜಿಲ್ಲಾಧ್ಯಕ್ಷ ಇಸಾಕ್ ಫೈಝಿಯವರು ಕಳೆದ ಒಂದೂವರೆ ವರ್ಷದಿಂದ ಕೋಲ್ಪೆ ಮಸೀದಿಯಲ್ಲಿ ಖತೀಬರಾಗಿ ಕರ್ತವ್ಯ ನಿರ್ವಹಿಸಿದ್ದು ಅವರ ಮಾದರಿ ಸೇವೆಗೆ ಮನಸೋತು ಜಮಾಅತ್‌ನ ಮುಸ್ಲಿಮರು ಎಂಟೂವರೆ ಲಕ್ಷ ರೂಪಾಯಿ ಮೌಲ್ಯದ ವ್ಯಾಗನರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಉಪ್ಪಿನಂಗಡಿಯ ಮಾರುತಿ ಷೋ ರೂಂ ನಿಂದ ಹೊಸ ಕಾರನ್ನು ಇಸಾಕ್ ಫೈಝಿ ಪಡೆದುಕೊಂಡಿದ್ದಾರೆ.

ಇಸಾಕ್ ಫೈಝಿ ಕೋಲ್ಪೆ ಮಸೀದಿಯಲ್ಲಿ ಖತೀಬರಾಗಿದ್ದುಕೊಂಡು ಸಮುದಾಯದ ಸಬಲೀಕರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ, ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಮೂಡಿಸಿ ನಾಡಿನ ಏಳಿಗಾಗಿ ಶ್ರಮಿಸುತ್ತಿದ್ದಾರೆ, ಶುಕ್ರವಾರದ ಜುಮಾ ಬಳಿಕ ಅವರು ನೀಡುವ ಪ್ರವಚನಗಳು ಒಳಿತಿನ ಕಡೆಗೆ ಸಾಗಲು ಮತ್ತು ಹೊಣೆಗಾರಿಕೆಯಿಂದ ಜೀವಿಸಲು ಪ್ರೇರಣೆ ನೀಡುತ್ತಿದೆ, ಆಝಾನ್ ಕರೆಯ ಬೆನ್ನಲ್ಲೇ ನಮಾಝ್‌ಗೆ ಬರುವಂತೆ ಕೋಲ್ಪೆಯ ಮುಸ್ಲಿಮರಿಗೆ ದಿನದ ಐದು ಹೊತ್ತು ಮೈಕ್‌ನಲ್ಲಿ ಕರೆ ಕೊಡುತ್ತಾರೆ, ಜಮಾಅತ್‌ನಲ್ಲಿ ಮಾದರಿ ಸೇವೆ ನೀಡುತ್ತಿರುವ ಖತೀಬರಿಗೆ ಉಡುಗೊರೆಯಾಗಿ ಹೊಸ ಕಾರು ನೀಡಿರುವುದಾಗಿ ಕೋಲ್ಪೆ ಜಮಾಅತ್ ಮಸೀದಿ ಆಡಳಿತ ಸಮಿತಿ ಸದಸ್ಯ ಕೆ.ಕೆ ಇಸ್ಮಾಯಿಲ್ ಕೋಲ್ಪೆ ತಿಳಿಸಿದರು. ಕಾರು ಜೊತೆಗೆ ಹೊಸ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿರುವುದಾಗಿ ಅವರು ತಿಳಿಸಿದರು.

  •  
Previous post

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ – ಸುಳ್ಯ ಸಾಂದೀಪ ವಿಶೇಷ ಚೇತನ ಶಾಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ

Next post

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ, ಲಿಫ್ಟ್ ಉದ್ಘಾಟನೆ

Leave a Reply

You May Have Missed

error: Content is protected !!