ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ಮಂಜೂರಾತಿ – 20,000ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು

ಶ್ರೀ ಕ್ಷೇತ್ರ ಧರ್ಮಸ್ಥಳ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ಮಂಜೂರಾತಿ – 20,000ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಡಬ ತಾಲೂಕು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ನಡೆಯುತ್ತಿರುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ಮಾದೇರಿ ಕಾರ್ಯಕ್ಷೇತ್ರದ ಲಕ್ಷ್ಮಿ ಅವರಿಗೆ ಶ್ರೀ ಕ್ಷೇತ್ರದಿಂದ ನೀಡುವ ಮಾಶಾಸನ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಸಹಾಯಕ ಹಾಗೂ ಆಸಕ್ತ ಜನರಿಗೆ ಪ್ರತಿ ತಿಂಗಳು ಮಾಶಾಸನ (ಮಾಸಿಕ ಭತ್ಯೆ) ನೀಡಲಾಗುತ್ತಿದ್ದು, ಯೋಜನೆಯಡಿ ಸುಮಾರು 20,000ಕ್ಕೂ ಹೆಚ್ಚು ಕುಟುಂಬಗಳು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿಯನ್ ಪಿ ಜೆ, ಮೇಲ್ವಿಚಾರಕ ಆನಂದ ಡಿ ಬಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಒಕ್ಕೂಟದ ಪದಾಧಿಕಾರಿ ಕಮಲಾಕ್ಷ ಗೌಡ, ಹರ್ಷಿತ ಹಾಗೂ ಸೇವಾ ಪ್ರತಿನಿಧಿ ಸಂತೋಷ್ ಕೆ ಎಂ ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!